ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದೂವರೆ ವರ್ಷಗಳಲ್ಲಿ ವಿಧಾನಸಭೆ ಸದಸ್ಯರ ವೈದ್ಯಕೀಯ ವೆಚ್ಚ ₹ 6.11 ಕೋಟಿ!

ವೈದ್ಯಕೀಯ ವೆಚ್ಚ: ನಿಯಮ ತಿದ್ದುಪಡಿ ಅಗತ್ಯ
Last Updated 5 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸುವ ಸಂಬಂಧ 1968ರ ನಿಯಮಕ್ಕೆ ತಿದ್ದುಪಡಿ ಮಾಡಬೇಕು. ಕೇವಲ ಸುತ್ತೋಲೆಯಿಂದ, ಶಾಸಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಿಲ್‌ ಮರು ಪಾವತಿ ತಡೆಹಿಡಿಯಲು ಸಾಧ್ಯ ಇಲ್ಲ’ ಎಂದು ವಿಧಾನಪರಿಷತ್ ಸಚಿವಾಲಯದ ಮೂಲಗಳು ಹೇಳಿವೆ.

ಈ ನಿಯಮದ 5ಎ (ಐ) ಪ್ರಕಾರ ವಿಧಾನಮಂಡಲದ ಸದಸ್ಯರು ಮತ್ತು ಅವರ ಕುಟುಂಬ (ಪತ್ನಿ, ಮಗ, ಅವಿವಾಹಿತ ಮಗಳು, ತಂದೆ ತಾಯಿ, ಮಹಿಳಾ ಶಾಸಕಿಯಾದರೆ ಅತ್ತೆ ಮಾವ) ಸದಸ್ಯರಿಗೆ ಅವಕಾಶವಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ವೆಚ್ಚವನ್ನು ಸರ್ಕಾರದಿಂದ ಮರುಪಾವತಿ ಮಾಡಿಸಿಕೊಳ್ಳಬಹುದು.


₹ 5 ಲಕ್ಷಕ್ಕಿಂತ ಹೆಚ್ಚು ಮೊತ್ತ ಮರುಪಾವತಿಸಿಕೊಂಡವರು

2013–14

ಶಾಸಕರು ಮೊತ್ತ

ಭೂಸನೂರ ರಮೇಶ ಬಾಳಪ್ಪ; 5,11,189

ಎನ್‌.ಎಚ್‌. ಶಿವಶಂಕರ ರೆಡ್ಡಿ; 5,16,936

ವಿಜಯಾನಂದ ಕಾಶಪ್ಪನವರ; 5,41,256

ಎಚ್‌.ಎಸ್‌. ಪ್ರಕಾಶ; 20,00,000

2014–15

ಎಚ್‌.ಎಸ್‌. ಪ್ರಕಾಶ; 14,58,269

ಕೆ. ಗೋಪಾಲಯ್ಯ; 6,97,260

ದೊಡ್ಡಮನಿ ರಾಮಕೃಷ್ಣ ಸಿದ್ಧಲಿಂಗಪ್ಪ; 5,50,928

ಎಸ್. ಜಯಣ್ಣ; 19,62,048

ಅಪ್ಪಾಜಿ ಗೌಡ; 11,17,275

2015–16

ಎಸ್‌. ಜಯಣ್ಣ; 8,83,537

ಮಾಲೀಕಯ್ಯ ಗುತ್ತೇದಾರ್‌; 14,05,798

ಅಬ್ಬಯ್ಯ ಪ್ರಸಾದ್‌; 5,46,931

ಎಸ್‌. ಚಿಕ್ಕಮಾದು; 34,85,042

ಜಿ.ಎಚ್‌. ಶ್ರೀನಿವಾಸ್; 5,40,569

ಎಚ್‌.ಪಿ. ರಾಜೇಶ್‌; 10,22,548

2016–17

ವೈ.ಎಸ್‌.ವಿ. ದತ್ತ; 8,92,987

ಎಸ್‌. ಚಿಕ್ಕಮಾದು; 6,21,927

ಎಸ್. ತಿಪ್ಪೇಸ್ವಾಮಿ; 7,46,050

ಕಮರುಲ್‌ ಇಸ್ಲಾಂ; 14,84,090

2017–18

ಎಚ್‌.ಡಿ. ಕುಮಾರಸ್ವಾಮಿ; 11,21,934

ಡಿ.ಬಿ. ಇನಾಮದಾರ; 7,62,732

ವೈ.ಎಸ್‌.ವಿ ದತ್ತ; 14,50,156

ಎ.ಎಸ್‌. ಪಾಟೀಲ; 5,02,338

ಎಸ್‌. ಚಿಕ್ಕಮಾದು; 32,29,085

ಜಿ.ಎಚ್‌. ಶ್ರೀನಿವಾಸ; 10,91,621

ಖನೀಜ್ ಫಾತಿಮಾ; 5,75,647

2018–19

ಖನೀಜ್ ಫಾತಿಮಾ; 22,53,324

ವೈ.ಎಸ್‌.ವಿ. ದತ್ತ; 5,06,453

ಸಂಭಾಜಿ ಪಾಟೀಲ; 11,43,333

ಎಚ್‌.ಪಿ. ರಾಜೇಶ್‌; 8,20,454

ವೈ.ಎಚ್‌. ಮೇಟಿ; 5,98,465

**

ವೈದ್ಯಕೀಯ ವೆಚ್ಚ ಮರುಪಾವತಿ ನಿಯಮ ದುರ್ಬಳಕೆ ಮಾಡಿಕೊಂಡು ಶಾಸಕರು ಸರ್ಕಾರದ ಬೊಕ್ಕಸ ಲೂಟಿ ಹೊಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಅಗತ್ಯ
- ಬಿ.ಎಸ್. ಗೌಡ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT