ಕಾರು ಪಲ್ಟಿ: ಎಂಎಲ್‌ಸಿ ಘೊಟ್ನೇಕರ ಅಪಾಯದಿಂದ ಪಾರು

7

ಕಾರು ಪಲ್ಟಿ: ಎಂಎಲ್‌ಸಿ ಘೊಟ್ನೇಕರ ಅಪಾಯದಿಂದ ಪಾರು

Published:
Updated:
Prajavani

ಹಳಿಯಾಳ: ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಗುರುವಾರ ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರೊಂದಿಗೆ ಇದ್ದ ಹಳಿಯಾಳ ಪುರಸಭೆ ಸದಸ್ಯ ಅನಿಲ ಚವ್ಹಾಣ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅವರು ಹಳಿಯಾಳದಿಂದ ಶಿರಸಿಗೆ ತೆರಳುತ್ತಿರುವ ವೇಳೆ ರಾಜ್ಯ ಹೆದ್ದಾರಿಯ ತಾಟವಾಳ ಸಮೀಪ ಈ ಅವಘಡ ನಡೆದಿದೆ. ಎದುರಿನಿಂದ ಬರುತ್ತಿದ್ದ ಇಂಡಿಗೋ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಮುಂದಾದಾಗ ಫಾರ್ಚುನರ್ ಪಲ್ಟಿಯಾಗಿದೆ ಎನ್ನಲಾಗಿದೆ. ಇಂಡಿಗೋ ಕಾರಿನ ಮುಂಭಾಗ ಜಖಂಗೊಂಡಿದೆ.

ಘೊಟ್ನೇಕರ ಅವರು ಕಾರಿನ ಎಡಬದಿಯಲ್ಲಿ ಕುಳಿತಿದ್ದರು. ಆ ಬದಿಯೇ ಕಾರು ಉರುಳಿದೆ. ಅದರಲ್ಲಿದ್ದ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. 


ಎಸ್.ಎಲ್.ಘೊಟ್ನೇಕರ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !