ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಒಬ್ಬರೇ ದೇಶಭಕ್ತರಲ್ಲ’

Last Updated 3 ಮಾರ್ಚ್ 2019, 20:01 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ ದೇಶಭಕ್ತರಲ್ಲ. ದೇಶದ 130 ಕೋಟಿ ಜನರಿಗೂ ದೇಶಭಕ್ತಿ ಇದೆ. ಜನರು ದೇಶಪ್ರೇಮವನ್ನು ಮೋದಿಯವರಿಂದ ಕಲಿಯಬೇಕಿಲ್ಲ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಎಲ್ಲೇ ಹೋದರೂ ಅಭಿವೃದ್ಧಿಗಾಗಿ ಪ್ರಬಲ‌ ಸರ್ಕಾರ ಬೇಕು ಎಂದು ಹೇಳುತ್ತಾರೆ. ಸ್ಥಿರ ಸರ್ಕಾರ ಇದ್ದಾಗಲೇ ಭಯೋತ್ಪಾದಕರ ದಾಳಿ ನಡೆದಿಲ್ಲವೇ? ಮಾತೆತ್ತಿದರೆ ತಾನು ಮತ್ತು ತನ್ನ ಸರ್ಕಾರ ಎನ್ನುತ್ತಾರೆ. ಹೇಳಿದ್ದನ್ನೇ ಪದೇ ಪದೇ ಹೇಳಿದರೆ ಜನ‌ ನಂಬುವುದಿಲ್ಲ. ಮಾತನಾಡುವುದು ಸುಲಭ, ಅನುಷ್ಠಾನಕ್ಕೆ ತರುವುದು ಕಷ್ಟ’ ಎಂದರು.

'ನಾನು ಪ್ರಧಾನಿಯಾಗಿ ಹತ್ತು ತಿಂಗಳ ಕಾಲ ಇದ್ದೆ. ಅದಕ್ಕೂ ಮೊದಲು ಹತ್ತು ವರ್ಷ ಕಾಲ ಪ್ರಧಾನಿ ಹುದ್ದೆಯಲ್ಲಿದ್ದವರು ಕಾಶ್ಮೀರಕ್ಕೆ ಭೇಟಿ ನೀಡಿರಲಿಲ್ಲ. ಅಲ್ಲಿ ಚುನಾವಣೆ ನಡೆಸಿರಲಿಲ್ಲ. ನಾನು ಹತ್ತು ತಿಂಗಳಲ್ಲಿ ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದೆ. ಅಲ್ಲಿ ಶಾಂತಿಯುತವಾಗಿ ಚುನಾವಣೆಯನ್ನೂ ನಡೆಸಿದ್ದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT