ಪ್ರತಾಪ್‌ ಸಿಂಹ, ಶ್ರೀನಿವಾಸಪ್ರಸಾದ್‌ ಮರೆತು ಸುಮಲತಾಗೆ ಮತ ಕೇಳಿದ ಮೋದಿ 

ಸೋಮವಾರ, ಏಪ್ರಿಲ್ 22, 2019
32 °C

ಪ್ರತಾಪ್‌ ಸಿಂಹ, ಶ್ರೀನಿವಾಸಪ್ರಸಾದ್‌ ಮರೆತು ಸುಮಲತಾಗೆ ಮತ ಕೇಳಿದ ಮೋದಿ 

Published:
Updated:

ಮೈಸೂರು: ರಾಜ್ಯ ಬಿಜೆಪಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನೇ ಉಲ್ಲೇಖಿಸದೇ ಭಾಷಣ ಮಾಡಿದರಾದರೂ, ಕೊನೆಗೆ ಜನರ ಬೆಂಬಲ ಕೇಳಿದ್ದು ಮಾತ್ರ ಸುಮಲತಾ ಅಂಬರೀಶ್‌ ಅವರಿಗೆ. 

ಸಮಾವೇಶದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡುಗು ಜಿಲ್ಲೆಗಳ ಹೆಸರುಗಳನ್ನು ಮೊದಲಿಗೇ ಪ್ರಸ್ತಾಪಿಸಿದರು. ನಂತರ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘ದೇವೇಗೌಡರು ಸೋಲಿಸಿಬಿಟ್ಟಾರು ಎಂಬ ಭಯದಿಂದಲೇ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಬರಲಿಲ್ಲ,‘ ಎಂದೆಲ್ಲಾ ಅಬ್ಬರಿಸಿದ ಮೋದಿ, ಇನ್ನೇನು ಭಾಷಣ ಮುಗಿಸುವ ಮುನ್ನ ದಿವಂಗತ ಅಂಬರೀಷ್‌ ಅವರನ್ನು ನೆನಪಿಸಿಕೊಂಡರು. ’ಸುಮಲತಾ ಅವರ ಕೈ ಹಿಡಿಯಿರಿ,’ ಎಂದು ಅವರು ಜನರಲ್ಲಿ ಮನವಿ ಮಾಡಿಕೊಂಡರು. ಅದಾದ ತಕ್ಷಣವೇ ಅವರ ಮಾತು ತಿರುಗಿದ್ದು ಚೌಕಿದಾರ್‌ ಕಡೆಗೆ. ‘ನೀವು ನೀಡುವ ಪ್ರತಿಮತವೂ ತಲುಪುವುದು ಈ ಚೌಕಿದಾರನಿಗೆ,’ ಎಂದು ಅವರು ಹೇಳಿದರು.  

ಆದರೆ, ವೇದಿಕೆಯಲ್ಲೇ ಇದ್ದ ಮೈಸೂರು–ಕೊಡಗು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪ್ರತಾಪ್‌ ಸಿಂಹ, ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸಪ್ರಸಾದ್‌ ಅವರ ಹೆಸರುಗಳನ್ನು ಮೋದಿ ಅವರು ಮೈಸೂರಿನಲ್ಲೇ ನಡೆದ ಸಮಾವೇಶದಲ್ಲಿ ಮರೆತರು. ಭಾಷಣ ಆರಂಭಕ್ಕೂ ಮೊದಲು ‘ವೇದಿಕೆ ಮೇಲಿರುವ ನಮ್ಮ ಪಕ್ಷದ ಅಭ್ಯರ್ಥಿಗಳೇ,‘ ಎಂದು ಸಂಬೋಧಿಸಿದ್ದು ಬಿಟ್ಟರೆ ಅವರು ಯಾರ ಹೆಸರುಗಳನ್ನೂ ಕೊನೆಯ ವರೆಗೆ ಹೇಳಲೇ ಇಲ್ಲ. 

ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 27ರಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ, ಮಂಡ್ಯದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 32

  Happy
 • 13

  Amused
 • 6

  Sad
 • 2

  Frustrated
 • 6

  Angry

Comments:

0 comments

Write the first review for this !