ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅವರದ್ದು ನಕಲಿ ಹಿಂದುತ್ವ: ರಾಮಲಿಂಗಾ ರೆಡ್ಡಿ ಟೀಕೆ

Last Updated 20 ಮಾರ್ಚ್ 2019, 9:11 IST
ಅಕ್ಷರ ಗಾತ್ರ

ಬೆಂಗಳೂರು:‘ಮೋದಿ ಅವರಿಗೆ ಗೋವುಗಳ ಬಗ್ಗೆ ನಿಜವಾದ ಪ್ರೀತಿ ಇದ್ದರೆ ಗೋ ಮಾಂಸ ರಫ್ತನ್ನು ನಿಲ್ಲಿಸಿ, ಗೋ ಹತ್ಯೆ ತಡೆಯಲಿ’ ಎಂದು ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದರು.

ಭಾರತ ದೇಶ ಗೋ ಮಾಂಸ ರಫ್ತು ಮಾಡುವಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. 26 ಸಾವಿರ ಕೋಟಿ ಟನ್ ಗೋ ಮಾಂಸವನ್ನು ಭಾರತ ರಫ್ತು ಮಾಡುತ್ತಿದೆಎಂದರು.

‘ಮೋದಿ ಅವರದ್ದು ನಕಲಿ ಹಿಂದುತ್ವ. ಆರ್‌ಎಸ್‌ಎಸ್‌– ರಾಷ್ಟ್ರೀಯ ಸೇವಾ ಸಂಸ್ಥೆಯಲ್ಲ. ಆರ್‌ಎಸ್‌ಎಸ್‌ ಅಂದರೆ ಅದು ರಿಲಾಯನ್ಸ್ ಸೇವಾ ಸಂಸ್ಥೆ’ಎಂದು ಆರ್‌ಎಸ್‌ಎಸ್‌ ವಿರುದ್ಧಗಂಭೀರ ಆರೋಪ ಮಾಡಿದರು.

ರಾತ್ರಿ ಬಾಂಬ್ ಹಾಕಿದ್ದ ಸೈನಿಕರ ಕಾರ್ಯವನ್ನು ಮೋದಿ ದೊಡ್ಡ ಪ್ರಚಾರಕ್ಕೆ ಬಳಸಿಕೊಂಡರು. ಇಂದಿರಾ ಗಾಂಧಿ ಅವರು ಯುದ್ಧ ಮಾಡಿದಾಗ ಪಾಕಿಸ್ತಾನದ 90 ಸಾವಿರ ಯುದ್ಧ ಕೈದಿಗಳನ್ನು ಸೆರೆ ಹಿಡಿದಿದ್ದೇವೆ. ಆದರೆ ಕಾಂಗ್ರೆಸ್ ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ.ಸೈನಿಕರ ಕಾರ್ಯವನ್ನು ಬಿಜೆಪಿ ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ದೂರಿದರು.

ಮಾನ್ಯತಾ ಟೆಕ್‌ ಪಾರ್ಕ್‌ ಘಟನೆಯಲ್ಲಿ ಬಿಜೆಪಿ ನಾಯಕರ ಕೈವಾಡವಿದೆ. ಮೋದಿನೂ ಬರ್ತಾರೆ, ಆಗ ರಾಹುಲ್ ರಾಹುಲ್ ಅಂತಾ ಕೂಗೋಕೆ ಆಗುತ್ತಾ, ಅದು ಸರಿಯಲ್ಲ. ಟೆಕಿಗಳ ವೇಷದಲ್ಲಿ ಬಿಜೆಪಿ ಕಾರ್ಯಕರ್ತರು ಬಂದು ಕೂಗಿದ್ದಾರೆ. ಬಿಜೆಪಿಯವರ ಕುತಂತ್ರ ಇದು ಎಂದು ವಾಗ್ದಾಳಿ ನಡೆಸಿದರು.

ಬೇಕಾದರೆ ಮೋದಿ ಕಾರ್ಯಕ್ರಮದಲ್ಲಿ ಅಮಿತ್‌ ಶಾ.. ಅಮಿತ್ ಶಾ.., ಗೊಡ್ಸೆ.. ಗೋಡ್ಸೆ.. ಅಂತ ಕೂಗಲಿ, ಯಾರು ಬೇಡ ಅಂದರು. ಇದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಬಿಜೆಪಿ ಕಾರ್ಯಕರ್ತರಿಗೆ ಮೋದಿ, ಅಮಿತ್‌ಶಾ ಬುದ್ದಿ ಹೇಳಲಿ ಎಂದರು.

‘ಮೋದಿ ಸ್ವಯಂಘೋಷಿತ ಚೌಕಿದಾರ್. ಎಲ್ಲರೂ ಕೊಳ್ಳೆ ಹೊಡ್ಕೊಂಡು ಹೋದ ಮೇಲೆ ಚೌಕಿದಾರ್ ಅಂತಿದ್ದಾರೆ. ನೀರವ್ ಮೋದಿ, ಮಲ್ಯ ಲೂಟಿ ಮಾಡಿಕೊಂಡು ಹೋಗುವಾಗ ಎಲ್ಲಿ ಕಾವಲು ಕಾಯುತ್ತಿದ್ದರು’ಎಂದು ಮೋದಿ ವಿರುದ್ಧಲೇವಡಿ ಮಾಡಿದರು.

‘ಮೇಯರ್ ಆಗ್ಬೇಕು ಅಂತಾ ಆಸೆ ಇತ್ತು‌‌. ಆದರೆ ಮೊದಲ ಸಲ ಕಾರ್ಪೊರೇಟರ್ ಆದಾಗಲೇ ಅಸೆಂಬ್ಲಿ ಟಿಕೆಟ್ ಸಿಕ್ತು. ಮಿನಿಸ್ಟರ್ ಆಗ್ಬೇಕು ಅನ್ಕೊಂಡೇ ಆದೆ. ಆದರೆ ಯಾವತ್ತೂ ಕೂಡ ಪಾರ್ಲಿಮೆಂಟ್‌ಗೆ ಹೋಗ್ಬೇಕು ಅಂತಾ ಅನ್ಕೊಂಡಿಲ್ಲ. ನಮ್ಮ ಮಗಳು ಸೌಮ್ಯ ಮೊದಲ ಸಲ ಶಾಸಕಿಯಾಗಿದ್ದಾರೆ’

‘ಬೆಂಗಳೂರು ದಕ್ಷಿಣದಲ್ಲಿ ಗೋವಿಂದರಾಜ್, ಕೃಷ್ಣಪ್ಪ ಸೇರಿದಂತೆ ಮೂರ್ನಾಲ್ಕು ಮಂದಿ ಇದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಅರ್ಹ ಅಭ್ಯರ್ಥಿಗಳಿದ್ದಾರೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT