ಮೋದಿ ರಾಜ್‌ ಮಾಫಿಯಾ ರಾಜ್: ದಿನೇಶ್‌ ಗುಂಡೂರಾವ್‌ ವಾಗ್ದಾಳಿ

ಗುರುವಾರ , ಏಪ್ರಿಲ್ 25, 2019
31 °C
ಕೆಪಿಸಿಸಿ ಅಧ್ಯಕ್ಷ

ಮೋದಿ ರಾಜ್‌ ಮಾಫಿಯಾ ರಾಜ್: ದಿನೇಶ್‌ ಗುಂಡೂರಾವ್‌ ವಾಗ್ದಾಳಿ

Published:
Updated:
Prajavani

ಮಂಗಳೂರು: ಪ್ರಧಾನಿ‌ ನರೇಂದ್ರ ಮೋದಿಯವರ ಆಡಳಿತದಲ್ಲಿ ದೊಡ್ಡ ಲೂಟಿಕೋರರಿಗೆ ರಕ್ಷಣೆ ದೊರೆಯುತ್ತಿದೆ. ‘ಮೋದಿ ರಾಜ್ ಮಾಫಿಯಾ ರಾಜ್’ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿಯವರ ಅವಧಿಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ವಂಚಿಸಿದವರು ಕೇಂದ್ರ ಸರ್ಕಾರದಿಂದಲೇ ರಕ್ಷಣೆ ಪಡೆದಿದ್ದಾರೆ. ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನೂ ಕೇಂದ್ರ ಸರ್ಕಾರ ಮನ್ನಾ ಮಾಡಿದೆ, ಆದರೆ, ಬಡವರ ಮೇಲೆ ಹೊರೆ ಹೊರಿಸಿದ್ದಾರೆ’ ಎಂದರು.

ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆಯ ಅಸಮರ್ಪಕ ಅನುಷ್ಠಾನದಿಂದ ದೇಶಕ್ಕೆ ₹ 4 ಲಕ್ಷ ಕೋಟಿ ನಷ್ಟವಾಗಿದೆ. ಈ ಹಣ ದೊಡ್ಡ ಉದ್ಯಮಿಗಳ ಪಾಲಾಗಿದೆ. ದೇಶದ ಪ್ರಧಾನಿ ದೊಡ್ಡ ಉದ್ಯಮಿಗಳ ಚೌಕಿದಾರ ಆಗಿದ್ದಾರೆ ಎಂದು ದೂರಿದರು.

ಚುನಾವಣಾ ಬಾಂಡ್ ಮೂಲಕ ಹಣ ಸಂಗ್ರಹಿಸಲು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಅಪಾಯಕಾರಿಯಾದುದು. ಬಿಜೆಪಿ ಸಾವಿರ ಕೋಟಿಗೂ ಹೆಚ್ಚು ಹಣ ಈ ಮೂಲಕ ಪಡೆದಿದೆ. ಬಾಂಡ್ ಮೂಲಕ ದಾವೂದ್ ಇಬ್ರಾಹಿಂ ಹಣ ನೀಡಿದರೂ ಬಿಜೆಪಿಯವರು ಪಡೆಯುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !