ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–2: ಮೋದಿ ಕಾಲ್ಗುಣದಿಂದಲೇ ಇಸ್ರೊಗೆ ಅಪಶಕುನ – ಕುಮಾರಸ್ವಾಮಿ

Last Updated 14 ಸೆಪ್ಟೆಂಬರ್ 2019, 9:08 IST
ಅಕ್ಷರ ಗಾತ್ರ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಕಾಲ್ಗುಣದಿಂದಲೇ ಇಸ್ರೊಗೆ ಅಪಶಕುನವಾಯಿತು ಎಂದು ಜೆಡಿಎಸ್ ಶಾಸಕ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ

‘ಚಂದ್ರಯಾನ–2 ಯೋಜನೆ ತನ್ನದೇ. ತಾನೇ ಚಂದ್ರನಲ್ಲಿ ನೌಕೆಯನ್ನು ಇಳಿಸುತ್ತಿದ್ದೇನೆ ಎಂದು ಬಿಂಬಿಸಿಕೊಂಡು ಪ್ರಚಾರ ಗಿಟ್ಟಿಸಲು ಪ್ರಧಾನಿ ಹವಣಿಸಿದ್ದರು. ಅದಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದರು. ವಿಜ್ಞಾನಿಗಳು 10–12 ವರ್ಷ ಕಠಿಣ ಪರಿಶ್ರಮ ಪಟ್ಟಿದ್ದು, ಮೋದಿ ಅವರು ಕೇವಲ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದರು. ಅವರು ಇಸ್ರೊ ಅಂಗಳಕ್ಕೆ ಕಾಲಿಟ್ಟ ಕ್ಷಣವೇ ಅವರ ಕಾಲ್ಗುಣದಿಂದ ವಿಜ್ಞಾನಿಗಳಿಗೆ ಅಪಶಕುನವಾಯ್ತು’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಚಂದ್ರಯಾನ–2ರ ವಿಕ್ರಂ ಲ್ಯಾಂಡರ್‌ ಚಂದ್ರನಲ್ಲಿ ಇಳಿಯುವ ಕೆಲವೇ ಕ್ಷಣಗಳ ಮುನ್ನ ಸೆಪ್ಟೆಂಬರ್ 7ರಂದು ಸಂಪರ್ಕ ಕಡಿದುಕೊಂಡಿತ್ತು. ಬಳಿಕ ಸಂಪರ್ಕ ಸಾಧಿಸುವುದು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ.

ನೆರೆ ಪರಿಹಾರ ನೀಡಿದಿರುವುದಕ್ಕೆ ಆಕ್ರೋಶ: ‘ರಷ್ಯಾಗೆ ₹ 7000 ಕೋಟಿ ನೆರವು ನೀಡಲು ಅವರ ಬಳಿ ಹಣವಿದೆ. ನೆರೆ ಸಂತ್ರಸ್ತರಿಗೆ ಬಿಡಿಗಾಸು ನೀಡುವ ಔದಾರ್ಯವಿಲ್ಲ’ ಎಂದು ಕಿಡಿ ಕಾರಿದ ಕುಮಾರಸ್ವಾಮಿ, ‘ಅಮಿತ್‌ ಶಾ ಸೇರಿದಂತೆ ಬೆರಳೆಣಿಕೆಯ ಒಂದಿಬ್ಬರನ್ನು ಬಿಟ್ಟು ಬಿಜೆಪಿಯ ಯಾವೊಬ್ಬ ಮುಖಂಡರೂ ಮಾತನಾಡುವ ಧೈರ್ಯ ತೋರುವುದಿಲ್ಲ. ಪಕ್ಷದವರಿಗೇ ಈ ಗತಿ ಇದ್ದು, ಇನ್ನು ನಮ್ಮನ್ನು ಮಾತನಾಡಿಸುತ್ತಾರಾ?’ ಎಂದೂ ಪ್ರಶ್ನಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT