ಮತ್ತೆ 11 ಜನರಿಗೆ ಮಂಗನ ಕಾಯಿಲೆ

7

ಮತ್ತೆ 11 ಜನರಿಗೆ ಮಂಗನ ಕಾಯಿಲೆ

Published:
Updated:

ಶಿವಮೊಗ್ಗ: ಸಾಗರ ತಾಲ್ಲೂಕು ಅರಳಗೋಡು ಸುತ್ತಲ ಗ್ರಾಮಗಳ 10 ಹಾಗೂ ಹೊಸನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುರುಳಿ ಗ್ರಾಮದ ಒಬ್ಬರಲ್ಲಿ ಶಂಕಿತ ಮಂಗನ ಕಾಯಿಲೆ ಲಕ್ಷಣಗಳು ಇರುವುದು ಮಂಗಳವಾರ ಪತ್ತೆಯಾಗಿದೆ.

11 ಜನರ ಪೈಕಿ ಇಬ್ಬರಿಗೆ ಸೋಂಕು ತಗುಲಿರುವುದು ಇದು ಎರಡನೇ ಬಾರಿ. ಜ್ವರದಿಂದ ಬಳಲುತ್ತಿರುವ ಎಲ್ಲರನ್ನೂ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಆನಂದಪುರ, ಗೌತಮ‍ಪುರ, ಕಲ್ಮನೆ ಭಾಗಗಳಲ್ಲಿ ಸತ್ತ ಮಂಗಗಳ ಶವಗಳು ಪತ್ತೆಯಾಗಿವೆ.

ಹಬ್ಬದ ದಿನವೂ ಕೆಲಸ: ಆರೋಗ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿ ಮಕರ ಸಂಕ್ರಮಣದ ದಿನವೂ ಜನರಿಗೆ ಮಂಗನ ಕಾಯಿಲೆ ನಿರೋಧಕ ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿದ್ದರು. 

ಇದುವರೆಗೆ 60 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. 50 ಜನರು ಗುಣಮುಖರಾಗಿದ್ದಾರೆ ಎಂದು ಸಾಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !