ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಲಗೋಡು: ಶಂಕಿತ ಮಂಗನಕಾಯಿಲೆಗೆ ಮತ್ತೆ 3 ಬಲಿ

Last Updated 14 ಜನವರಿ 2019, 20:00 IST
ಅಕ್ಷರ ಗಾತ್ರ

ಕಾರ್ಗಲ್: ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಂಕಿತ ಮಂಗನ ಕಾಯಿಲೆಗೆ ಭಾನುವಾರ ಒಬ್ಬರು ಮತ್ತು ಸೋಮವಾರ ಇಬ್ಬರು ಬಲಿಯಾಗಿದ್ದಾರೆ.

ಅರಲಗೋಡು ಸರಹದ್ದಿನಲ್ಲಿರುವ ಬಿಳಿಗಾರು ಗ್ರಾಮದ ನಿವಾಸಿ ಕೂಲಿಕಾರ ಭೀಮರಾಜ್ ಬಸಪ್ಪ (49) ಶಂಕಿತ ಮಂಗನ ಕಾಯಿಲೆ ಜ್ವರದಿಂದ ಬಳಲುತ್ತಿದ್ದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಭಾನುವಾರ ರಾತ್ರಿ ಅವರು ಸಾವು ಕಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಂಚೀಕೈ ಗ್ರಾಮದ ಕೃಷಿ ಕೂಲಿ ಚಟುವಟಿಕೆಯಲ್ಲಿ ತೊಡಗಿದ್ದ ಹಾಲಪ್ಪ (50) ಭಾನುವಾರ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರು. ಜ್ವರ ಉಲ್ಬಣಿಸಿದ ಕಾರಣ ಸೋಮವಾರ ಮಣಿಪಾಲ ಆಸ್ಪತ್ರೆಗೆ ಹೋಗುವ ಸಿದ್ಧತೆಯಲ್ಲಿದ್ದಾಗಲೇ ಮನೆಯಲ್ಲಿ ಮೃತಪಟ್ಟಿದ್ದಾರೆ.

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರಲಗೋಡು ವಾಟೇಮಕ್ಕಿ ನಿವಾಸಿ ಸವಿತಾ ನಾರಾಯಣ್ (52) ಸೋಮವಾರ ಸಂಜೆ ಸಾವು ಕಂಡಿದ್ದಾರೆ. ಇದರಿಂದ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 9 ಜನರು ಮೃತಪಟ್ಟಂತಾಗಿದೆ.

ಜ್ವರದಿಂದ ಬಳಲಿದ ಪಿಡಿಒ: ಅರಲಗೋಡು ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿರುವ ಭಾನುಕುಳಿ ಗ್ರಾಮ ಪಂಚಾಯಿತಿಯ ಪಿಡಿಒ ಮುಕ್ತಾ ವಿ. ಮೊಗೇರ ಸೋಮವಾರ ಜ್ವರದಿಂದ ಅಸ್ವಸ್ಥಗೊಂಡಿದ್ದಾರೆ ಎಂದು ಪಂಚಾಯಿತಿ ಮೂಲಗಳು ತಿಳಿಸಿವೆ.

ಇನ್ನಿಬ್ಬರು ಮಣಿಪಾಲ ಆಸ್ಪತ್ರೆಗೆ

ಶಂಕಿತ ಮಂಗನ ಕಾಯಿಲೆ ಜ್ವರದಿಂದ ಬಳಲುತ್ತಿರುವ ಅರಲಗೋಡು ಗ್ರಾಮ ಪಂಚಾಯಿತಿಯ ಮಂಡವಳ್ಳಿ ಮಜಿರೆಯ ರವಿಕೀರ್ತಿ ಮತ್ತು ದೊಂಬೆಕೈ ಮಜಿರೆಯ ಲಕ್ಷ್ಮೀದೇವಿ ಅವರನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಸೋಮವಾರ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆರೋಗ್ಯ ಇಲಾಖಾ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT