ಶನಿವಾರ, ನವೆಂಬರ್ 23, 2019
17 °C
*ಸಂಚಾರ ನಿಯಮ ಉಲ್ಲಂಘನೆ * ರಾಜ್ಯಕ್ಕೂ ‘ಗುಜರಾತ್’ ಮಾದರಿ

ಸಂಚಾರ ದಂಡ ‍‍‍ಇಳಿಕೆ ಇಂದು?

Published:
Updated:

ಬೆಂಗಳೂರು: ಕೇಂದ್ರ ಮೋಟಾರು ವಾಹನ‌ ಕಾಯ್ದೆ (ತಿದ್ದುಪಡಿ) ಅನ್ವಯ ಸೆ. 3ರಿಂದ ಹೆಚ್ಚಳಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಮೊತ್ತವನ್ನು ಗುಜರಾತ್ ಮಾದರಿಯಲ್ಲೇ ಇಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 24 ಪ್ರಕರಣಗಳಿಗೆ ಸಂಬಂಧಿಸಿದಂತೆ ಗುಜರಾತ್‌ ರಾಜ್ಯದಲ್ಲಿ ದಂಡ ಮೊತ್ತ ಪರಿಷ್ಕರಿಸಲಾಗಿದೆ. ರಾಜ್ಯದಲ್ಲೂ ಅದೇ ಮಾದರಿಯನ್ನು ಅನುಸರಿಸಬಹುದು ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿದೆ. ಆದರೂ, ಸಂಸದೀಯ ಇಲಾಖೆಯಿಂದಲೂ ಈ ಬಗ್ಗೆ ಅಭಿಪ್ರಾಯ ಕೇಳುವುದು ಸೂಕ್ತ ಎಂದೂ ಸಲಹೆ ನೀಡಿದೆ.

‘ಕಾನೂನು ಇಲಾಖೆ ಅಭಿಪ್ರಾಯದಂತೆ ದಂಡ ಮೊತ್ತವನ್ನು ಪರಿಷ್ಕರಿಸಿ, ಕರಡು ಅಧಿಸೂಚನೆ ಸಿದ್ಧಪಡಿಸಿದ್ದು, ಶುಕ್ರವಾರ ಸಂಸದೀಯ ಇಲಾಖೆಗೆ ಸಲ್ಲಿಸಲಾಗುವುದು. ಸಂಸದೀಯ ಇಲಾಖೆ ಸಹಮತ ಸೂಚಿಸಿದ ಬಳಿಕ ಅಧಿಸೂಚನೆ ಹೊರಬೀಳಲಿದೆ’ ಎಂದು ಇಲಾಖೆ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

‘24 ಪ್ರಕರಣಗಳ ಪೈಕಿ ಕೆಲ ಪ್ರಕರಣಗಳಲ್ಲಿ ಕಾಯ್ದೆಯಲ್ಲಿರುವ ಮೊತ್ತವನ್ನೇ ಗುಜರಾತ್ ಸರ್ಕಾರ ಕೂಡಾ ಉಳಿಸಿಕೊಂಡಿದೆ’ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)