ಮಂಗಳವಾರ, ಅಕ್ಟೋಬರ್ 15, 2019
26 °C

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಜನ್ಮ ದಿನ: ಭರ್ಜರಿ ಉಡುಗೊರೆ

Published:
Updated:

ಸೂಲಿಬೆಲೆ: ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಮತ್ತು ಶಿವನಾಪುರ ಗ್ರಾಮಗಳಲ್ಲಿ ಹೊಸಕೋಟೆಯ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಅವರು ಭಾನುವಾರ ಸುಮಾರು ಎರಡು ಸಾವಿರ ಸೀರೆ, ಕಂಬಳಿ ಹಂಚಿದರು.

ನಾಗರಾಜ್‌ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಲಾಯಿತು. ಶನಿವಾರ ಈ ಗ್ರಾಮಗಳಲ್ಲಿ ಮನೆ ಮನೆಗೆ ಟೋಕನ್‌ ಹಂಚಲಾಗಿತ್ತು.  ಅದನ್ನು ತಂದ ಮಹಿಳೆಯರಿಗೆ ಸೀರೆ, ಪುರುಷರಿಗೆ ಕಂಬಳಿಯನ್ನು ಉಡುಗೊರೆಯಾಗಿ ನೀಡಲಾಯಿತು. ಕಾರ್ಯಕ್ರಮಕ್ಕೆ ಬಂದವರು ಬಿರಿಯಾನಿಯನ್ನೂ ಸವಿದರು.

ಚುನಾವಣೆ ಗಿಮಿಕ್: ಈ ಕ್ಷೇತ್ರದ ಉಪಚುನಾವಣೆ ಸಮೀಪಿಸುತ್ತಿರುವ ಕಾರಣ ಮತದಾರರ ಬೇಟೆ ಈಗಿನಿಂದಲೇ ಪ್ರಾರಂಭವಾಗಿದ್ದು ಇದು ಚುನಾವಣೆಯ ಗಿಮಿಕ್ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿಸಿತು.

Post Comments (+)