ಬೆಂಗಳೂರು ಉತ್ತರಕ್ಕೆ ಹೋಗಲ್ಲ: ಮುದ್ದಹನುಮೇಗೌಡ 

ಶುಕ್ರವಾರ, ಏಪ್ರಿಲ್ 26, 2019
28 °C

ಬೆಂಗಳೂರು ಉತ್ತರಕ್ಕೆ ಹೋಗಲ್ಲ: ಮುದ್ದಹನುಮೇಗೌಡ 

Published:
Updated:

ತುಮಕೂರು: ನಾನು ತುಮಕೂರು ಜಿಲ್ಲೆಯವ. ಈ ಕ್ಷೇತ್ರದ ಹಾಲಿ ಸಂಸದ. ಇಲ್ಲಿಯೇ ಸ್ಪರ್ಧೆ ಮಾಡುತ್ತೇನೆ. ನಾನೇಕೆ ಬೆಂಗಳೂರು ಉತ್ತರಕ್ಕೆ ಹೋಗಿ ಸ್ಪರ್ಧಿಸಲಿ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ಹೇಳಿದರು.

ನಾಮಪತ್ರ ಸಲ್ಲಿಕೆಗೆ ತೆರಳುವ ಮುನ್ನ ನಗರದ ಹೊರ ವಲಯದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ನನಗೆ ಈಗಲೂ ವಿಶ್ವಾಸವಿದೆ. ಕಾಂಗ್ರೆಸ್ ಹೈಕಮಾಂಡ್ ಬಿ.ಫಾರಂ ಕೊಡಲಿದೆ ಎಂದು ನಂಬಿದ್ದೇನೆ. ಏನೇ ಇರಲಿ. ನಾನು ನಾಮಪತ್ರ ಸಲ್ಲಿಸುತ್ತಿದ್ದು, ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಜೆಡಿಎಸ್ ಗೆ ತುಮಕೂರು ಕ್ಷೇತ್ರ ಬಿಟ್ಟುಕೊಡುವ ಮುನ್ನ ಹಾಲಿ ಸಂಸದನಾಗಿ ನನ್ನ ಜೊತೆಗೆ ಚರ್ಚೆ ಮಾಡಿಲ್ಲ ಎಂಬ ನೋವು ಇದೆ ಎಂದರು

ಬರಹ ಇಷ್ಟವಾಯಿತೆ?

 • 30

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !