‘ಬಹುಕೋಟಿ ವಂಚನೆ ಪ್ರಕರಣ ಸಿಐಡಿಗೆ’

7

‘ಬಹುಕೋಟಿ ವಂಚನೆ ಪ್ರಕರಣ ಸಿಐಡಿಗೆ’

Published:
Updated:

ಬೆಳಗಾವಿ: ‘ಚಲನಚಿತ್ರ ನಿರ್ಮಾಪಕ, ಇಲ್ಲಿನ ಸಂಗೊಳ್ಳಿರಾಯಣ್ಣ ಕೋ-ಆಪ್ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ವಿರುದ್ಧದ ಬಹುಕೋಟಿ ವಂಚನೆ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ತಿಳಿಸಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಿದ್ಧವಿಟ್ಟುಕೊಂಡಿದ್ದೇವೆ. ಸಿಐಡಿಯಿಂದ ತನಿಖಾಧಿಕಾರಿ ನೇಮಕವಾಗಿಲ್ಲ. ಅವರು ಬಂದ ಕೂಡಲೆ ಎಲ್ಲ ದಾಖಲೆಗಳನ್ನೂ ಅವರಿಗೆ ಹಸ್ತಾಂತರಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಗ್ರಾಹಕರು ಠೇವಣಿಯಾಗಿ ಕಟ್ಟಿದ ಬಹುಕೋಟಿಯನ್ನು ಸ್ವಂತಕ್ಕೆ ಬಳಸಿಕೊಂಡು, ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ‌ಆರೋಪ ಅಪ್ಪುಗೋಳ ಮೇಲಿದೆ. ತಮ್ಮ ಹಣ ಮರಳಿಸುವಂತೆ ಆಗ್ರಹಿಸಿ ಠೇವಣಿದಾರರು ಆಗಾಗ ಪ್ರತಿಭಟನೆ ನಡೆಸುತ್ತಿದ್ದರು. ಗ್ರಾಹಕರು ಠೇವಣಿ ಹಣದಿಂದ ಖರೀದಿಸಿದ್ದ ₹ 41.35 ಲಕ್ಷ ಮೌಲ್ಯದ ವಾಹನಗಳನ್ನು ಅಪ್ಪುಗೋಳ ಅವರಿಂದ ಪೊಲೀಸರು ಈಚೆಗೆ ವಶಪಡಿಸಿಕೊಂದ್ದರು.

ಅಪ್ಪುಗೋಳ ಪತ್ನಿ, ಸಂಗೊಳ್ಳಿರಾಯಣ್ಣ ಸಹಕಾರಿ ಸೊಸೈಟಿ ನಿರ್ದೇಶಕಿಯೂ ಆದ ಪ್ರೇಮಾ ಅವರನ್ನು ಪೊಲೀಸರು ಜುಲೈ 6ರಂದು ಬಂಧಿಸಿದ್ದರು. ಜುಲೈ 10ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !