ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ವಿಧಾನಸಭೆಯಲ್ಲಿ ದಿ.ಜಯಲಲಿತಾ ಭಾವಚಿತ್ರ: ತೆರವುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

Last Updated 12 ಫೆಬ್ರುವರಿ 2018, 10:31 IST
ಅಕ್ಷರ ಗಾತ್ರ

ಚೆನ್ನೈ: ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಭಾವಚಿತ್ರವನ್ನು ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ಅನಾವರಣಗೊಳಿಸಲಾಯಿತು. ಇದನ್ನು ವಿರೋಧಿಸಿ ಕಾರ್ಯಕ್ರಮದಿಂದ ದೂರ ಉಳಿದ ವಿರೋಧ ಪಕ್ಷಗಳು ‘ಭ್ರಷ್ಟಾಚಾರ ಕಳಂಕಿತರಿಗೆ ಇಂತಹ ಗೌರವವನ್ನು ನೀಡಬಾರದು’ ಎಂದು ದೂರಿವೆ. 

ಜಯಲಲಿತಾ ಅವರು ಬದುಕಿದ್ದಾಗ ವಿ.ಕೆ.ಶಶಿಕಲಾ ಜತೆ ಬೆಂಗಳೂರಿನ ಜೈಲಿನಲ್ಲಿ ಹಲವು ದಿನಗಳ ಕಾಲ ಶಿಕ್ಷೆ ಅನುಭವಿಸಿದ್ದರು ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್‌ ಹಿಂದಿನ ಘಟನೆಗಳನ್ನು ನೆನಪಿಸಿದ್ದಾರೆ.

‘ಅಪರಾಧಿಯ ಭಾವಚಿತ್ರವನ್ನು ಹಾಕುವ ಮೂಲಕ ಸದನದ ಘನತೆಗೆ ಧಕ್ಕೆ ಉಂಟುಮಾಡಬಾರದು. ತಮಿಳುನಾಡು ವಿಧಾನಸಭೆಯ ಒಳಗೆ ಪ್ರಮುಖ ನಾಯಕರ ಭಾವಚಿತ್ರಗಳ ಸಾಲಿನಲ್ಲಿ ಅವರ(ಜಯಲಲಿತಾ) ಭಾವಚಿತ್ರವನ್ನು ಸೇರಿಸುವುದಕ್ಕೆ ನಮ್ಮ ಬೆಂಬಲವಿಲ್ಲ’ ಎಂದಿದ್ದಾರೆ.

ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭಾವಚಿತ್ರ ಅನಾವರಣಗೊಳಿಸಿದ್ದು, ಡಿಎಂಕೆ, ಕಾಂಗ್ರೆಸ್‌ ಹಾಗೂ ಭಾರತೀಯ ಮುಸ್ಲಿಂ ಲೀಗ್‌ ಒಕ್ಕೂಟ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.

ಸದ್ಯ ಪ್ರಮುಖ ವಿರೋಧ ಪಕ್ಷ ಡಿಎಂಕೆ ಭಾವಚಿತ್ರ ತೆರವುಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜಯಲಲಿತಾ ಹಸಿರು ಸೀರೆಯಲ್ಲಿರುವ ಸುಮಾರು 7 ಅಡಿ ಎತ್ತರದ ಭಾವಚಿತ್ರ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT