ಶನಿವಾರ, ಫೆಬ್ರವರಿ 22, 2020
19 °C

ಅಮಿತ್‌ ಶಾ ಭಾಷಣ ಕೇಳಿ ಎಂದು ಮುಂಗಾರು ಮಳೆ ಹಾಡು ಕೇಳಿಸಿದ ಬಿಜೆಪಿ ಟ್ವೀಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜನ ಜಾಗೃತಿ ಮೂಡಿಸಲು ಹುಬ್ಬಳ್ಳಿಗೆ ಆಗಮಿಸಿದ್ದ ಅಮಿತ್‌ ಶಾ ಅವರ ಕಾರ್ಯಕ್ರಮದ ನೇರ ಪ್ರಸಾರ ನೋಡಿ ಎಂದು ಟ್ವೀಟ್‌ ಮಾಡಿದ್ದ ಬಿಜೆಪಿ, ವಿಡಿಯೊದಲ್ಲಿ ಮುಂಗಾರು ಮಳೆ ಹಾಡು ಪ್ರಸಾರ ಮಾಡಿದೆ. 

ಹುಬ್ಬಳ್ಳಿ ಸಮಾವೇಶವನ್ನು ನೇರ ಪ್ರದರ್ಶನ ಮಾಡುವುದಾಗಿ ಬಿಜೆಪಿ ತನ್ನ ಟ್ವಿಟರ್‌ ಖಾತೆ ಮೂಲಕ ವಿಡಿಯೊ ಹಂಚಿಕೊಂಡಿತ್ತು. ಸರಿ ಸುಮಾರು 2.31 ಗಂಟೆಗಳ ಆ ವಿಡಿಯೊದ  ಆರಂಭದ 21 ನಿಮಿಷಗಳ ಕಾಲ ‘ಮುಂಗಾರು ಮಳೆ’ ಸಿನಿಮಾದ ಹಾಡುಗಳೇ ಕೇಳಿ ಬರುತ್ತವೆ. ನಂತರದ ಒಂದೂವರೆ ಘಂಟೆಗಳ ಕಾಲ ಈ ವಿಡಿಯೊದಲ್ಲಿ ಯಾವುದೇ ದೃಶ್ಯಾವಳಿಗಳು ಕಾಣಸಿಗುವುದಿಲ್ಲ. ಆಡಿಯೊ ಕೂಡ ಕೇಳುವುದಿಲ್ಲ.

2.01 ಗಂಟೆ ನಂತರ ಅಮಿತ್‌ ಶಾ ಅವರ ಭಾಷಣದ ದೃಶ್ಯಾವಳಿಗಳು ಕಾಣಿಸುತ್ತವೆ.  ಭಾಷಣ ಅರ್ಧ ಗಂಟೆಯಲ್ಲೇ ಮುಕ್ತಾಯಗೊಳ್ಳುತ್ತದೆ. 

ಟ್ವೀಟ್‌ ಡಿಲಿಟ್‌

ವರದಿ ನಂತರ ಎಚ್ಚೆತ್ತುಕೊಂಡ ಬಿಜೆಪಿ, ಹಾಡಿನೊಂದಿಗೆ ಆರಂಭವಾಗುವ ವಿಡಿಯೊವನ್ನು ಡಿಲಿಟ್‌ ಮಾಡಿದೆ. ‘ಬಿಜೆಪಿ ಇಂಡಿಯಾ’ ಹಂಚಿಕೊಂಡಿದ್ದ ಅಮಿತ್‌ ಶಾ ಅವರ ಭಾಷಣವನ್ನು ರೀ ಟ್ವೀಟ್‌ ಮಾಡಿಕೊಂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು