ಶನಿವಾರ, ನವೆಂಬರ್ 23, 2019
17 °C

ಕೇವಲ ₹ 50ಕ್ಕೆ ಯುವಕನ ಕೊಲೆ

Published:
Updated:

ಬೆಂಗಳೂರು: ಗಾಂಜಾ ವಿಷಯದಲ್ಲಿ ಬುಧವಾರ ಬೆಳಿಗ್ಗೆ ಇಬ್ಬರ ಮಧ್ಯೆ ಆರಂಭವಾದ ಜಗಳ, ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದೇವರಜೀವನ ಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಡಿ.ಜಿ. ಹಳ್ಳಿಯ ಮೋದಿ ರಸ್ತೆಯ ನಿವಾಸಿ ಸಯ್ಯದ್ ವಸೀಂ (19) ಹತ್ಯೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿ, ಮೃತನ ಪರಿಚಿತ ಶಬೀರ್ (20) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೇಕರಿಯೊಂದರಲ್ಲಿ ಸೈಯದ್‌ ವಸೀಂ ಕೆಲಸ ಮಾಡುತ್ತಿದ್ದು, ಶಬೀರ್ ಮರದ ಕೆಲಸ ಮಾಡಿಕೊಂಡಿದ್ದ. ಇಬ್ಬರೂ ಪರಿಚಿತರಾಗಿದ್ದು, ಸ್ಥಳೀಯ ನಿವಾಸಿಗಳು. ಗಾಂಜಾ ಖರೀದಿ ಮಾಡಲು ₹ 50 ಕೊಡುವಂತೆ ಮಂಗಳವಾರ ರಾತ್ರಿ ಸೈಯದ್‌ ವಸೀಂ ಬಳಿ ಶಬೀರ್ ಕೇಳಿದ್ದಾನೆ ಈ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿದ್ದರು ಎನ್ನಲಾಗಿದೆ.

ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಮೋದಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸೈಯದ್‌ ವಸೀಂ, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಬೀರ್‌ನನ್ನು ನೋಡಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಮರದ ಕೆಲಸಕ್ಕೆ ಬಳಸುತ್ತಿದ್ದ ವಸ್ತುವಿನಿಂದ ಸಯ್ಯದ್‌ನ ಎದೆಗೆ ಶಬೀರ್‌ ಇರಿದಿದ್ದಾನೆ.

ಪ್ರತಿಕ್ರಿಯಿಸಿ (+)