ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪ್ತಿ ವಿಸ್ತರಣೆಗೆ ಮುಂದಾದ ಸಂಗೀತ ವಿ.ವಿ

Last Updated 14 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿ ವಿಸ್ತರಣೆಗೆ ಮುಂದಾಗಿದೆ. ಬೆಂಗಳೂರು, ಧಾರವಾಡ, ಕಲಬುರ್ಗಿ, ಬೆಳಗಾವಿ, ಮಂಗಳೂರಿನಲ್ಲಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿದೆ.

‘ಈ ಕೇಂದ್ರಗಳಲ್ಲಿ ಪ್ರದರ್ಶಕ ಕಲೆಗಳ ವಿವಿಧ ವಿಷಯಗಳಲ್ಲಿ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಲಾಗುವುದು. ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗುವುದು’ ಎಂದು ವಿ.ವಿ ಪ್ರಭಾರಿ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಭಕ್ತಿ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ಹಾರ್ಮೋನಿಯಂ, ತಬಲ, ಯಕ್ಷಗಾನ, ಗಮಕ, ಯೋಗ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ನಟುವಾಂಗ, ಮೃದಂಗ, ಕಲಾ ವಿಮರ್ಶೆ, ಪಾಶ್ಚಿಮಾತ್ಯ ಸಂಗೀತ ಮತ್ತು ವಾದ್ಯ, ಸಂಗೀತ ಶಾಸ್ತ್ರ, ಕೀಬೋರ್ಡ್‌, ಗಿಟಾರ್‌, ಮ್ಯಾಂಡೋಲಿನ್‌, ಕೊಳಲು, ಪಿಟೀಲು, ಭರತನಾಟ್ಯ, ರಂಗ ಸಂಗೀತ, ಡ್ರಂ ಸೇರಿದಂತೆ ಹಲವು ವಿಷಯಗಳಲ್ಲಿ ಕೋರ್ಸ್‌ ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.

ಆರು ತಿಂಗಳ ಕೋರ್ಸ್‌ ಇದಾಗಿದ್ದು, ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಪ್ರವೇಶಾತಿಗೆ ಅರ್ಹರು. ಪ್ರತ್ಯೇಕ ಶುಲ್ಕದೊಂದಿಗೆ ಎರಡು ವಿಷಯಗಳಲ್ಲಿ ಪ್ರವೇಶ ಪಡೆಯಬಹುದು. ಫೆ.18ರಿಂದ ಅರ್ಜಿ ವಿತರಣೆ ಮಾಡಲಿದ್ದು, ಸಲ್ಲಿಕೆಗೆ ಮಾರ್ಚ್‌ 20 ಕಡೆಯ ದಿನ ಎಂದರು.

ಡಿ.ಲಿಟ್‌ಗೆ ಅವಕಾಶ: ವಿ.ವಿ.ಯಲ್ಲಿ ವಿವಿಧ ವಿಭಾಗಗಳಲ್ಲಿ ಡಿ.ಲಿಟ್‌ ಪದವಿ ಕೋರ್ಸ್‌ ಮತ್ತೆ ಆರಂಭಿಸಲು ಅನುಮತಿ ದೊರೆತಿದ್ದು, ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು.

ಮಾಹಿತಿಗೆ 0821–2402141 ಅಥವಾ ವೆಬ್‌ಸೈಟ್‌ www.musicuniversity.ac.in ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT