ಪಕ್ಷದ ಸೂಚನೆಯಂತೆ ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡಿರುವೆ: ಡಿ.ಕೆ.ಶಿವಕುಮಾರ್‌

ಬುಧವಾರ, ಜೂಲೈ 17, 2019
29 °C

ಪಕ್ಷದ ಸೂಚನೆಯಂತೆ ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡಿರುವೆ: ಡಿ.ಕೆ.ಶಿವಕುಮಾರ್‌

Published:
Updated:

ಮದ್ದೂರು: ‘ಬಿಜೆಪಿ ಶಾಸಕ ಶ್ರೀರಾಮುಲು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಕ್ರಿಯೆ ನೀಡದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ವ್ಯಂಗ್ಯವಾಡಿದರು.

ಇದನ್ನೂ ಓದಿ... ಕಾಂಗ್ರೆಸ್‌ಗೆ ‘ಶಕುನಿ’ಯಿಂದ ಸೋಲು| ಡಿಕೆಶಿ ಕಾಲೆಳೆದ ಶ್ರೀರಾಮುಲು

ಸುದ್ದಿಗಾರರ ಜೊತೆ ಮಾತನಾಡಿ, ‘ಶ್ರೀರಾಮುಲು ಅಣ್ಣನವರ ಟ್ವೀಟ್‌ ವಿಚಾರದ ಬಗ್ಗೆ ಮುಂದೊಂದು ದಿನ ಉತ್ತರ ಕೊಡುತ್ತೇನೆ. ಈಗ ಕಾಂಗ್ರೆಸ್‌ ಪಕ್ಷ ನನ್ನ ಬಾಯಿಗೆ ಬೀಗ ಹಾಕಿದೆ. ಪಕ್ಷದ ಸೂಚನೆ ಪಾಲಿಸುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ನಾನೊಬ್ಬ ಮಂತ್ರಿ. ಮಂತ್ರಿ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಐಎಂಎ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌ ನನಗೆ ಗೊತ್ತಿಲ್ಲ. ಆತನ ಮಗ ನನ್ನ ಸ್ನೇಹಿತ. ಇನ್ನುಳಿದ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದರು.

ಇದನ್ನೂ ಓದಿ... ಮಧ್ಯಂತರ ಚುನಾವಣೆ ಕೇವಲ ಬ್ಲ್ಯಾಕ್‌ಮೇಲ್‌ ತಂತ್ರ: ಶಾಸಕ ಬಿ.ಶ್ರೀರಾಮುಲು ಆರೋಪ

ಕಾರು ತಡೆದ ರೈತರು: ನಾಲೆಗಳಿಗೆ ಕೆಆರ್‌ಎಸ್‌ ಜಲಾಶಯದಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ಗೆಜ್ಜಲಗೆರೆ ಬಳಿ ಸಚಿವ ಶಿವಕುಮಾರ್‌ ಅವರ ಕಾರು ತಡೆದರು. ನಾಲೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !