ಬುಧವಾರ, ಏಪ್ರಿಲ್ 21, 2021
23 °C
ಎಸ್‌ಸಿ/ಎಸ್‌ಟಿ ಜನಪ್ರತಿನಿಧಿಗಳಿಗೆ ಸನ್ಮಾನ

ನನ್ನ ಪರಿಸ್ಥಿತಿ ಕೂಡ ದಲಿತ ನೌಕರರ ರೀತಿಯೇ ಇದೆ: ಡಿಸಿಎಂ ಜಿ.ಪರಮೇಶ್ವರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿ.ಪರಮೇಶ್ವರ್‌ ಕಾರ್ಯಕ್ರಮದಲ್ಲಿ ಮಾತನಾಡಿದರು. 

 ಬೆಂಗಳೂರು: ‘ಯಾರು ಮಾಡಿದ ಪುಣ್ಯವೋ ಇಂದು ನಾನು ಡಿಸಿಎಂ ಆಗಿದ್ದೇನೆ. ಆದ್ರೆ ನನ್ನ ಪರಿಸ್ಥಿತಿ ಕೂಡ ದಲಿತ ನೌಕರರ ರೀತಿಯೇ ಇದೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಹೇಳಿದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಶಾಸಕರು ಮತ್ತು ಸಂಸದರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ನನಗು ಇನ್ನೂ ಪ್ರಮೋಷನ್ ಆಗಿಲ್ಲ. ನಿಮಗಾದ್ರೆ ಕಾನೂನಿದೆ, ನನಗೆ ಯಾವುದಿದೆ? ಎಂದು ಡಿಸಿಎಂ ತಮ್ಮ ಸಾತ್ವಿಕ ಸಿಟ್ಟು ಹೊರಹಾಕಿದರು. 

‘ನೀವೆಲ್ಲಾ ತೊಂದರೆ ಆದಾಗ ಅಂಬೇಡ್ಕರ್‌ ನೆನಪಿಸಿಕೊಂಡಿದ್ದೀರಿ. ಸ್ವಲ್ಪ ತಡವಾಗಿ ನೆನಪಿಸಿಕೊಂಡಿದ್ದೀರಿ. ಮೊದಲೇ ಹೆಚ್ಚು ಒಗ್ಗಟ್ಟಾಗಿದ್ದರೆ ಯಾವೋನೂ ಹೀಗೆ ಮುಟ್ಟುತ್ತಿರಲಿಲ್ಲ. ದಲಿತ ಮುಖ್ಯಮಂತ್ರಿ ಅಂತಾರೆಯೇ ಹೊರತು‌ ನಮ್ಮನ್ನೂ ಮುಖ್ಯಮಂತ್ರಿ ಅನ್ನೋದಿಲ್ಲ. ಬಸವಲಿಂಗಯ್ಯನವರಿಗೆ, ರಂಗನಾಥ್ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ. ಈಗ ನನ್ನನ್ನು ದಲಿತ ಉಪಮುಖ್ಯಮಂತ್ರಿ ಅಂತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

‘ಮಲ್ಲಿಕಾರ್ಜುನ ಖರ್ಗೆ ನಾನು ‌ಕಂಡ ಅಪ್ರತಿಮ ನಾಯಕ. ನಾನು ವಿದ್ಯಾರ್ಥಿ ದೆಸೆಯಿಂದಲೂ ಖರ್ಗೆಯನ್ನ ನೋಡಿದ್ದೇನೆ. ಅಂಥ ಧೀಮಂತ ‌ಖರ್ಗೆ ಅವರು ಡಿಸಿಎಂ ಕೂಡ ಆಗಲಿಲ್ಲ’ ಎಂದು ಕನಿಕರ ತೋರ್ಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು