‘ನನ್ನ ಮಗ ಕೊಲೆ ಮಾಡಿಲ್ಲ’: ಜಯಶ್ರೀ ಬದ್ದಿ

7
‘ಅಪ್ಪ ಬೇಕು ಎನ್ನುತ್ತಿರುವ ಮಗ’

‘ನನ್ನ ಮಗ ಕೊಲೆ ಮಾಡಿಲ್ಲ’: ಜಯಶ್ರೀ ಬದ್ದಿ

Published:
Updated:
ಹುಬ್ಬಳ್ಳಿಯ ಚೈತನ್ಯನಗರದಲ್ಲಿರುವ ಆರೋಪಿ ಗಣೇಶ್ ಮಿಸ್ಕಿನ್ ಮನೆ ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ‘ನನ್ನ ಮಗ ಕೊಲೆ ಮಾಡಿಲ್ಲ, ಆತನನ್ನು ಯಾಕೆ ಬಂಧಿಸಿದ್ದಾರೋ ಗೊತ್ತಿಲ್ಲ’ ಎಂದು ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹುಬ್ಬಳ್ಳಿಯ ಅಮಿತ್ ಬದ್ದಿ ಅವರ ತಾಯಿ ಜಯಶ್ರೀ ಹೇಳಿದರು.

ಹುಬ್ಬಳ್ಳಿಯ ಜನತಾ ಬಜಾರ್ ಸಮೀಪ ಇರುವ ತಾಡಪತ್ರಿ ಗಲ್ಲಿಯ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ರಾತ್ರಿ ಮಾತನಾಡಿದ ಅವರು, ‘ಇಡೀ ಕುಟುಂಬದ ಜವಾಬ್ದಾರಿಯನ್ನು ಆತ ಹೊತ್ತಿದ್ದ. ಶನಿವಾರ ಮನೆಯಿಂದ ಹೊರಗೆ ಹೋದವನು ವಾಪಸ್ ಬಂದಿಲ್ಲ. ಪೊಲೀಸರು ವಿನಾಕಾರಣ ಬಂಧಿಸಿದ್ದಾರೆ’ ಎಂದು ಅವರು ಹೇಳಿದರು.

‘ಅವರು ಅಂತಹವರಲ್ಲ. ಏನಾಗಿದೆ ಎಂದು ಪೊಲೀಸರು ನಮಗೆ ಒಂದು ಮಾತು ಸಹ ತಿಳಿಸಿಲ್ಲ. ಅವರನ್ನು ಕರೆದುಕೊಂಡು ಹೋದ ನಂತರ ಮಗ ಅಪ್ಪ ಬೇಕು ಎಂದು ಅಳುತ್ತಿದ್ದಾನೆ. ಅವರಿಗೆ ಏನಾದರೂ ಆದರೆ, ನಾವು ಬದುಕುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಅಮಿತ್‌ ಪತ್ನಿ ಅಂಜಲಿ ಕಣ್ಣೀರಿಟ್ಟರು. ಅವರಿಗೆ ಮೂರು ವರ್ಷದ ಮಗ ಇದ್ದಾನೆ.

ಇನ್ನೊಬ್ಬ ಆರೋಪಿ ಗಣೇಶ್ ಮಿಸ್ಕಿನ್, ಚೈತನ್ಯ ನಗರದ ಬಾಡಿಗೆ ಮನೆಯಲ್ಲಿ ತಾಯಿಯೊಂದಿಗೆ ಮೂರು ವರ್ಷಗಳಿಂದ ವಾಸವಿದ್ದ. ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಆದ್ದರಿಂದ, ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ತಿಳಿಸಿದರು. ಮನೆಯಲ್ಲಿ ಯಾರೂ ಇರಲಿಲ್ಲ. ಭಾನುವಾರ ಹಾಗೂ ಸೋಮವಾರ ದಿನ ಪತ್ರಿಕೆ ಮನೆಯ ಮುಂದೆ ಬಿದ್ದಿದ್ದವು.

ಗಣೇಶ ಕೆಲಸ ಮಾಡುತ್ತಿದ್ದ ಅಗರಬತ್ತಿ ಕಾರ್ಖಾನೆಯ ಸಮೀಪ ಆತನನ್ನು ಪೊಲೀಸರು ವಶಕ್ಕೆ ಪಡೆದು, ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಈ ವಿಷಯ ತಿಳಿದ ಕುಟುಂಬದವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರೂ ಅವರು ಮಾಹಿತಿ ನೀಡಲಿಲ್ಲ ಎನ್ನಲಾಗಿದೆ.

ಸಭೆಗಳಲ್ಲಿ ಭಾಗವಹಿಸುತ್ತಿದ್ದರು

ಅಮಿತ್ ಬದ್ದಿ ಮತ್ತು ಗಣೇಶ್ ಮಸ್ಕಿನ್ ಸ್ನೇಹಿತರು. ಇಬ್ಬರೂ ಚೈತನ್ಯನಗರದಲ್ಲಿರುವ ಜ್ಯೂಸ್ ಸೆಂಟರ್‌ನಲ್ಲಿ ಆಗಾಗ್ಗೆ ಸೇರುತ್ತಿದ್ದರು. ಸಮಾನ ಮನಸ್ಕರು ನಡೆಸುತ್ತಿದ್ದ ಧರ್ಮ ಸಭೆಗಳಲ್ಲಿ ಸಹ ಅವರು ಭಾಗವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

 

 

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 4

  Sad
 • 0

  Frustrated
 • 0

  Angry

Comments:

0 comments

Write the first review for this !