ಮೈಸೂರು: ವೇದಿಕೆಯಲ್ಲಿ ಭಾವುಕರಾದ ಪ್ರಮೋದಾ ದೇವಿ ಒಡೆಯರ್

ಮಂಗಳವಾರ, ಜೂನ್ 18, 2019
23 °C

ಮೈಸೂರು: ವೇದಿಕೆಯಲ್ಲಿ ಭಾವುಕರಾದ ಪ್ರಮೋದಾ ದೇವಿ ಒಡೆಯರ್

Published:
Updated:

ಮೈಸೂರು: ‘ಸ್ವಂತಕ್ಕಾಗಿ ಎಂದೂ ಚಿಂತಿಸದೇ ಇದ್ದ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಜೀವನದುದ್ದಕ್ಕೂ ಕಷ್ಟದ ಹಾದಿಯನ್ನೇ ತುಳಿದರು’ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಕಣ್ಣೀರಿಟ್ಟರು.

ಮೈಸೂರು ರಾಜವಂಶಸ್ಥರು ಸ್ಥಾಪಿಸಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಅವರು ಭಾವುಕರಾದರು.

‘ನಲವತ್ತು ವರ್ಷಗಳ ಪತಿಯೊಂದಿಗಿನ ಒಡನಾಟ ನನ್ನನ್ನು ಗಟ್ಟಿಗೊಳಿಸಿತು. ಅವರು ಕಲಾರಾಧಕರರಾಗಿದ್ದರು. ಹೃದಯ ವೈಶಾಲ್ಯತೆ ಹೊಂದಿದ್ದರು. ಯಾರಿಗೂ ಕೇಡು ಬಯಸಿರಲಿಲ್ಲ. ಆದರೆ, ರಾಜವಂಶಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಆಸ್ತಿಯನ್ನು ಉಳಿಸಿಕೊಳ್ಳಲು ಅವರು ಕಾನೂನು ಹೋರಾಟ ನಡೆಸಿದ್ದು ಅವರನ್ನು ಬಳಲಿಸಿತು’ ಎಂದು ಸ್ಮರಿಸಿದರು.

ಅವರು ಸೂಕ್ಷ್ಮ ಸ್ವಭಾವದ ವ್ಯಕ್ತಿ ಹಾಗೂ ಅತ್ಯುತ್ತಮ ಪತಿಯಾಗಿದ್ದರು ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !