ಮೈಸೂರಿನಲ್ಲಿ ಫೆ. 11ರಿಂದ ‘ಭಾರತ ರಂಗ ಮಹೋತ್ಸವ’

7

ಮೈಸೂರಿನಲ್ಲಿ ಫೆ. 11ರಿಂದ ‘ಭಾರತ ರಂಗ ಮಹೋತ್ಸವ’

Published:
Updated:

ಮೈಸೂರು: ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದ ಸಹಯೋಗದೊಂದಿಗೆ ಫೆ. 11ರಿಂದ 17ರ ವರೆಗೆ ಮೈಸೂರಿನಲ್ಲಿ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವ ಆಯೋಜಿಸಲಾಗಿದೆ.

ಎನ್‌ಎಸ್‌ಡಿ 20ನೇ ವರ್ಷದ ರಂಗ ಮಹೋತ್ಸವ ಅಂಗವಾಗಿ ಮೈಸೂರು ಸೇರಿದಂತೆ ದೇಶದ ಆರು ನಗರಗಳಲ್ಲಿ ನಾಟಕ ಪ್ರದರ್ಶನ ಆಯೋಜಿಸಿದೆ.

ಏಳು ದಿನಗಳಲ್ಲಿ ಹಿಂದಿ, ಬಂಗಾಳಿ, ಮಲಯಾಳಂ, ಅಸ್ಸಾಮಿ, ನೇಪಾಳಿ, ಇಂಗ್ಲಿಷ್‌ ಮತ್ತು ಸ್ಪಾನಿಷ್‌ ಭಾಷೆಯ ಒಟ್ಟು ಏಳು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಎನ್‌ಎಸ್‌ಡಿ ಹಿರಿಯ ಪ್ರಾಧ್ಯಾಪಕ ಅಶೋಕ್‌ ಸಾಗರ್‌ ಭರತ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ. 12ರಿಂದ 14ರ ವರೆಗೆ ರಂಗಶಿಕ್ಷಣ ಕುರಿತು ವಿಚಾರ ಸಂಕಿರಣ ಮತ್ತು ಕಾರ್ಯಾಗಾರ ನಡೆಯಲಿದೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !