ಸೋಮವಾರ, ಅಕ್ಟೋಬರ್ 21, 2019
22 °C
ವಿಜಯದಶಮಿ ಮೆರವಣಿಗೆಗೆ ಸಾಂಸ್ಕೃತಿಕ ನಗರಿ ಸಜ್ಜು

ನಾಡಹಬ್ಬ: ಜಂಬೂಸವಾರಿ ವೈಭವ ನಾಳೆ

Published:
Updated:
Prajavani

ಮೈಸೂರು: ವಿಜಯದಶಮಿ ಮೆರವಣಿಗೆಗಾಗಿ ಸಿಂಗಾರಗೊಂಡಿರುವ ಮೈಸೂರಿನಲ್ಲಿ ಸಡಗರ ಮುಗಿಲು ಮುಟ್ಟಿದೆ. ಜಂಬೂಸವಾರಿಯ ವೈಭವವನ್ನು ಕಣ್ತುಂಬಿಕೊಳ್ಳಲು, ಚಾಮುಂಡೇಶ್ವರಿ ದೇವಿಯ ಕಣ್ತುಂಬಿಕೊಂಡು ಭಕ್ತಿ ಭಾವದಲ್ಲಿ ಮಿಂದೇಳಲು ಜನ ಕಾತರದಿಂದ ಕಾದಿದ್ದಾರೆ.

ಸೋಮವಾರದ ಆಯುಧಪೂಜೆ ಸಡಗರ ಮುಗಿದರೆ ಮರುದಿನವೇ ವಿಜಯದಶಮಿ ಸಂಭ್ರಮ. ಮಂಗಳವಾರ ಮಧ್ಯಾಹ್ನ 2.15ರಿಂದ 2.58ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನಡೆಯಲಿದೆ. ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ. ಅಂಬಾರಿಯಲ್ಲಿಪ್ರತಿಷ್ಠಾಪನೆಯಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಂಜೆ 4.31ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುಷ್ಪಾರ್ಚನೆ ಮಾಡಲಿದ್ದಾರೆ.

‌‌ಅರಮನೆಯೊಳಗೆ 26 ಸಾವಿರ ಮಂದಿಗೆ ಆಸನ ವ್ಯವಸ್ಥೆ ಹಾಗೂ ಅಂಬಾರಿ ಸಾಗುವ ಎರಡೂ ಬದಿಯಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಅಂದು ರಾತ್ರಿ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನೊಂದಿಗೆ 10 ದಿನಗಳ ಉತ್ಸವಕ್ಕೆ ತೆರೆ ಬೀಳಲಿದೆ.

ಪೂಜಾ ಕೈಂಕರ್ಯ: ಆಯುಧಪೂಜೆ ಹಾಗೂ ವಿಜಯದಶಮಿ ದಿನದಂದು ಅರಮನೆಯಲ್ಲಿ ರಾಜವಂಶಸ್ಥರು ವಿವಿಧ ಪೂಜೆ ನೆರವೇರಿಸಲಿದ್ದಾರೆ. ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಮಂಗಳವಾರ ವಜ್ರಮುಷ್ಟಿ ಕಾಳಗ ನಡೆಯಲಿದೆ.

-ಸತತ ಎಂಟನೇ ಬಾರಿ ಅಂಬಾರಿ ಹೊರಲಿರುವ ಅರ್ಜುನ

-ಸೋಮವಾರ ಅರಮನೆಯಲ್ಲಿ ಆಯುಧಪೂಜೆ

-ಪಂಜಿನ ಕವಾಯತಿನೊಂದಿಗೆ ನಾಡಹಬ್ಬಕ್ಕೆ ಮಂಗಳವಾರ ತೆರೆ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)