ಷೂನಲ್ಲಿ ತಲೆ ಚಚ್ಚಿಕೊಂಡ ಕಾಂಗ್ರೆಸ್‌ ಕಾರ್ಯಕರ್ತ

7

ಷೂನಲ್ಲಿ ತಲೆ ಚಚ್ಚಿಕೊಂಡ ಕಾಂಗ್ರೆಸ್‌ ಕಾರ್ಯಕರ್ತ

Published:
Updated:

ಮೈಸೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ನಿ ಸೋಲಿನಿಂದ ಬೇಸತ್ತ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಶನಿವಾರ ಇಲ್ಲಿ ನಡೆದ ಪಕ್ಷದ ಸಭೆಯಲ್ಲಿ ಷೂನಿಂದ ತಲೆ ಚಚ್ಚಿಕೊಂಡರು.

ಮುಖಂಡ ವಾಸು, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷರಾದ ಆರ್‌.ಮೂರ್ತಿ (ನಗರ), ಬಿ.ಜೆ.ವಿಜಯಕುಮಾರ್ (ಗ್ರಾಮಾಂತರ) ಎದುರು ಕಾರ್ಯಕರ್ತರು ಪರಸ್ಪರ ಕೈ ಮಿಲಾಯಿಸಲು ಮುಂದಾದರು.

‘ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಸೋಲುಂಟಾಯಿತು’ ಎಂದು ತಿಲಕನಗರ, ಮೀನಾ ಬಜಾರ್‌ ವಾರ್ಡ್‌ಗಳ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದರು. 26ನೇ ವಾರ್ಡ್‌ನಲ್ಲಿ ಮೂರನೇ ಸ್ಥಾನ ಪಡೆದ ಷಾಜಿಯ ಬೇಗಂ ಪತಿ ರೆಹಮತ್‌ ಉಲ್ಲಾ ಟೀಪು ‘ಇಷ್ಟು ವರ್ಷ ಕಾಂಗ್ರೆಸ್‌ಗಾಗಿ ದುಡಿದು ತಪ್ಪು ಮಾಡಿದೆ’ ಎಂದು ಷೂನಿಂದ ತಲೆ ಚಚ್ಚಿಕೊಂಡರು.

ಬರಹ ಇಷ್ಟವಾಯಿತೆ?

  • 2

    Happy
  • 2

    Amused
  • 0

    Sad
  • 2

    Frustrated
  • 1

    Angry

Comments:

0 comments

Write the first review for this !