ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯ ಶುಲ್ಕ ಮತ್ತಷ್ಟು ದುಬಾರಿ

ಆಹಾರ ಪದಾರ್ಥಗಳ ಬೆಲೆ ಏರಿಕೆ, ಸಿಬ್ಬಂದಿ ವೇತನ ಹೆಚ್ಚಳ ಕಾರಣ
Last Updated 25 ಜೂನ್ 2019, 20:00 IST
ಅಕ್ಷರ ಗಾತ್ರ

ಮೈಸೂರು: ಚಾಮರಾಜೇಂದ್ರ ಮೃಗಾಲಯ ಪ್ರವೇಶ ದರದಲ್ಲಿ ಮತ್ತೆ ₹ 20 ಹೆಚ್ಚಳವಾಗಿದ್ದು, ವಾರಾಂತ್ಯದ ದಿನಗಳ ಶುಲ್ಕ ಶತಕದ ಗೆರೆ ತಲುಪಿದೆ.ವರ್ಷ ಕಳೆಯುವುದರಲ್ಲಿ ಎರಡನೇ ಬಾರಿ ಪ್ರವೇಶ ಶುಲ್ಕದಲ್ಲಿ ಏರಿಕೆ ಮಾಡಲಾಗಿದ್ದು, ಪ್ರವಾಸಿಗರ ಹರ್ಷವನ್ನು ಕುಗ್ಗಿಸಿದೆ.

ಸರ್ಕಾರಿ ರಜೆ ದಿನಗಳಲ್ಲಿ ಹಾಗೂ ವಾರಾಂತ್ಯದಲ್ಲಿ ಮೃಗಾಲಯಕ್ಕೆ ಭೇಟಿ ನೀಡಲು, ಪ್ರವಾಸಿಗರು ಇನ್ನುಮುಂದೆ ₹ 100 ಶುಲ್ಕ ಪಾವತಿಸಬೇಕು. ಉಳಿದ ದಿನಗಳಂದು ಈ ಶುಲ್ಕವನ್ನು ₹ 80ಕ್ಕೆ ಏರಿಸಲಾಗಿದೆ.

ಕರ್ನಾಟಕ ಮೃಗಾಲಯ ಪ್ರಾಧಿ ಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪ್ರವೇಶ ದರವನ್ನು ಏರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

‘ಸಿಬ್ಬಂದಿ ವೇತನದಲ್ಲಿ ಹಾಗೂ ಪ್ರಾಣಿಗಳ ಆಹಾರ ಪದಾರ್ಥಗಳ ದರದಲ್ಲಿ ಆದ ಹೆ‌ಚ್ಚಳ, ಅಭಿವೃದ್ಧಿ ಕಾಮಗಾರಿಗಳು, ಹೊಸ ಪ್ರಾಣಿಗಳನ್ನು ತರುವುದು, ನಿರ್ವಹಣಾ ವೆಚ್ಚಗಳ ಹೊರೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೃಗಾಲಯಕ್ಕೆ ಬೇರೆಡೆಯಿಂದ ಅನುದಾನ ಬರುವುದಿಲ್ಲ. ನಮ್ಮ ಖರ್ಚನ್ನು ನಾವೇ ಭರಿಸಬೇಕು. ನೂತನ ದರ ಪಟ್ಟಿಯನ್ನು ಮೃಗಾಲಯದ ವೆಬ್‌ಸೈಟ್‌ನಲ್ಲೂ ಹಾಕಲಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.‌

ಕಳೆದ ಎರಡು ವರ್ಷಗಳಲ್ಲಿ ₹ 40 ಹೆಚ್ಚಳವಾಗಿದೆ. ಕಾರಂಜಿ ಕೆರೆ ಪ್ರವೇಶ ಶುಲ್ಕ, ಪಾರ್ಕಿಂಗ್ ಶುಲ್ಕ ಹಾಗೂ ಬ್ಯಾಟರಿ ಚಾಲಿತ ವಾಹನದ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಮೃಗಾಲಯ ಹಾಗೂ ಕಾರಂಜಿ ಕೆರೆ ವೀಕ್ಷಣೆಗಿರುವ ಕಾಂಬೊ ಟಿಕೆಟ್ ಬೆಲೆಯಲ್ಲೂ ವ್ಯತ್ಯಾಸವಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ ₹ 100 ಹಾಗೂ ವಾರಾಂತ್ಯದಲ್ಲಿ ₹ 120 ಶುಲ್ಕ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT