ನಿಗೂಢ ಶಬ್ದ ತಂದ ಆತಂಕ

7

ನಿಗೂಢ ಶಬ್ದ ತಂದ ಆತಂಕ

Published:
Updated:

ಹುಲಿಯೂರುದುರ್ಗ: ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ 3.50ರ ಸಮಯದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಸದ್ದು ಉಂಟಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾದರು.

‘ಹಿಂದೆಂದೂ ಕೇಳರಿಯದ ಶಬ್ಧ. ಎಲ್ಲಿಂದ, ಹೇಗೆ ಬಂತೆಂದು ಊಹಿಸಲು ಸಾಧ್ಯವಿಲ್ಲದಷ್ಟು ವ್ಯಾಪಕವಾಗಿತ್ತು’ ಎಂದು ಗಿಡದ ಕೆಂಚನಹಳ್ಳಿ ಅಂಕೇಗೌಡ ಪ್ರಜಾವಾಣಿಗೆ ತಿಳಿಸಿದರು.

‘ಸಿಡಿಲಿನಂತೆ ಮೊದಲು ಆಸ್ಫೋಟಿಸಿದ ಸದ್ದು, ನಂತರ ಗುಡುಗಿನಂತೆ ಕೆಲವು ಕ್ಷಣ ಹರಿದು ಹೋಯಿತು’ ಎಂದು ನಿಡಸಾಲೆ ಗ್ರಾಮದ ಕೃಪಶ್ ಹೇಳಿದರು.

ಹಳೇಪೇಟೆ ಹಾಗೂ ಜನತಾ ಕಾಲೋನಿಗಳಲ್ಲಿ ಮನೆಗಳು ಕಂಪಿಸಿದ ಬಗ್ಗೆ ವಿಜಯಕುಮಾರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !