ಸೋಮವಾರ, ಅಕ್ಟೋಬರ್ 21, 2019
22 °C
ಜಂಬೂ ಸವಾರಿ

LIVE | ಮೈಸೂರು ದಸರಾ: ಅಂಬಾರಿಗೆ ಸಿಎಂ ಪುಷ್ಪಾರ್ಚನೆ, ಜಂಬೂ ಸವಾರಿಗೆ ಮನಸೋತ ಜನ

Published:
Updated:

ಮೈಸೂರು: ನಿಗದಿಯಂತೆ ಸಂಜೆ 4.55ಕ್ಕೆ ಅರಮನೆ ಮುಂಭಾಗದಿಂದ ಚಿನ್ನದ ಅಂಬಾರಿ ಹೊತ್ತು ‘ಅರ್ಜುನ’ ಆನೆ ಹೆಜ್ಜೆ ಹಾಕುತ್ತಿದ್ದಾನೆ. ಈ ಮೂಲಕ ಜಂಬೂ ಸವಾರಿಗೆ ಚಾಲನೆ ದೊರೆತಿದೆ. ಸ್ತಬ್ಧಚಿತ್ರಗಳ ಮೆರೆವಣಿಗೆ ಮುಂದೆ ಸಾಗಿದ್ದು, ವಿವಿಧ ಜಿಲ್ಲೆ, ಇಲಾಖೆಗಳಿಂದ ನಿರ್ಮಿಸಿರುವ ಸಾಮಾಜಿಕ ಕಳಕಳಿ ಹಾಗೂ ದೇಶದ ಸಾಧನೆ ಮತ್ತು ಮಹಿಳೆ–ಮಕ್ಕಳ ಜಾಗೃತಿ ಕಲಾಕೃತಿಗಳು ಗಮನ ಸೆಳೆಯುತ್ತಿವೆ. 


ಜಂಬೂ ಸವಾರಿ ಕಣ್ತುಂಬಿಕೊಳ್ಳುತ್ತಿರುವ ಜನ


ಅಂಬಾರಿ ಹೊತ್ತ ಅರ್ಜುನ ಹೆಜ್ಜೆ ಹಾಕುತ್ತಾ ಮುಂದೆ ಸಾಗಿದ...

ಜಂಬೂ ಸವಾರಿಗೆ ಪುಷ್ಪಾರ್ಚನೆ, ಚಾಲನೆ

4.15: ಮುಖ್ಯಂಮತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ’ಅರ್ಜುನ‘ನ ಮೇಲಿನ ಅಂಬಾರಿಯಲ್ಲಿ ವಿರಾಜಮಾನವಾಗಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು. ಈ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.


ಮೆರವಣಿಗೆ ಕಣ್ತುಂಬಿಕೊಳ್ಳಲು ಮನೆ ಮೇಲೇರಿ ಕುಳಿತು ಕಾತರದಿಂದ ಕಾಯುತ್ತಿರುವ ಜನ


ಉತ್ಸವದಲ್ಲಿ ಆದಿಕವಿ ಪಂಪನವರ ಸ್ತಬ್ಧಚಿತ್ರ .


ಉತ್ಸವದಲ್ಲಿ 61 ವರ್ಷದ ಬಲರಾಮ ಇದ್ದು, ಸತತ 14 ವರ್ಷ ಕಾಲ ಅಂಬಾರಿ ಹೊತ್ತಿರುವ ಹೆಗ್ಗಳಿಕೆ ಬಲರಾಮನಿಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೂ ಮುನ್ನ ಗಜಪಡೆ ಬಣ್ಣಗಳಿಂದ ಸಿಂಗಾರಗೊಂಡಿದ್ದು ಹೀಗೆ...


ಮೆರವಣಿಗೆಯಲ್ಲಿ ಕಲಾವಿದರಿಗೆ ನೀರು, ಮಜ್ಜಿಗೆ ವಿತರಣೆ


ಮೆರವಣಿಗೆಯಲ್ಲಿ ಅತಿವೃಷ್ಟಿಯನ್ನು ನೆನಪಿಸುವ ಹಾಗೂ ಹೆಲಿಕಾಪ್ಟರ್‌ ಮತ್ತು ದೋಣಿಗಳ ಮೂಲಕ ನಡೆಸಿದ ರಕ್ಷಣಾ ಕಾರ್ಯಾಚರಣೆಯನ್ನು ನೆನಪಿಸುವ ಸ್ತಬ್ಧಚಿತ್ರ.

 


ಅತಿವೃಷ್ಟಿಯ ವೇಳೆ ಹೆಲಿಕಾಪ್ಟರ್‌ ಮತ್ತು ದೋಣಿಗಳ ಮೂಲಕ ನಡೆಸಿದ ರಕ್ಷಣಾ ಕಾರ್ಯಾಚರಣೆಯನ್ನು ನೆನಪಿಸುವ ಸ್ತಬ್ಧಚಿತ್ರ.


ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಯನ್ನು ನೆನಪಿಸುವ ಸ್ತಬ್ಧಚಿತ್ರ .


ಜಂಬೂಸವಾರಿ ವೀಕ್ಷಣೆಗೆ ನೂಕುನುಗ್ಗಲು 

ದಸರಾ ಮೆರವಣಿಗೆಯ ನೇರ ಪ್ರಸಾರ ಡಿ.ಡಿ ಚಂದನದಲ್ಲಿ. 

2:14–ಮೈಸೂರು ಅರಮನೆ ಅಂಗಳದಲ್ಲಿ ಜಂಬೂಸವಾರಿಗೆ ಕ್ಷಣಗಣನೆ..

2:09–ಶುಭ ಮಕರ ಲಗ್ನದಲ್ಲಿ  ಮುಖ್ಯಮಂತ್ರಿ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. 

1:58–ಐರಾವತ ಬಸ್ ನಲ್ಲಿ ನಂದಿ ಧ್ವಜ ಪೂಜೆಗೆ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಿಂದ ಹೊರಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

1:46–ಸಾಂಪ್ರದಾಯಿಕ ದಿರಿಸಿನಲ್ಲಿ ಅರಮನೆಗೆ ಹೋದ ಮುಖ್ಯಮಂತ್ರಿ ಯಡಿಯೂರಪ್ಪ.

12:50–ಜಂಬೂಸವಾರಿ ವೀಕ್ಷಣೆಗೆ ಬೆಳಗಿನಿಂದಲೇ ವಿದೇಶಿಗರು ಕುತೂಹಲದಿಂದ ಕಾದು ಕುಳಿತಿದ್ದಾರೆ. ಹಸಿವು ನೀಗಿಸಿಕೊಳ್ಳಲು ಬಾಳೆಹಣ್ಣು ತಿಂದು ಕಾಯುತ್ತಿರುವ ಅವರು,  ಅಂಬಾರಿ ಹೊತ್ತು ಬರುವ ಅರ್ಜುನನಿಗಾಗಿ ಎದುರು ನೋಡುತ್ತಿದ್ದಾರೆ

12:41– ಜಂಬೂ ಸವಾರಿ ವೀಕ್ಷಣೆಗಾಗಿ ಈಗಾಗಲೇ ನೂಕುನುಗ್ಗಲು ಉಂಟಾಗಿದೆ. ಒಂದು ಕಡೆ ಬಿಸಿಲು ಲೆಕ್ಕಿಸದೆ ಜನರು ಕುಳಿತು ಕಾಯುತ್ತಿದ್ದಾರೆ. ರಾಜಮಾರ್ಗದ ಅಕ್ಕಪಕ್ಕದ ಅಂಗಡಿ, ಆವರಣಗೋಡೆ ಮೇಲ್ಭಾಗದಲ್ಲಿ ಜನಸ್ತೋಮ ಕಾಣಬಹುದು

12:40– ಜಂಬೂ ಸವಾರಿ ವೀಕ್ಷಣೆಗಾಗಿ ಮಂಗಳವಾರ ನಸುಕಿನಿಂದಲೇ ರಾಜಮಾರ್ಗ ( ಸರ್ಕಾರಿ ಆಯುರ್ವೇದ ಕಾಲೇಜು)ದ ಪಕ್ಕದಲ್ಲಿ ಕುಳಿತಿರುವ ಜನರು

11:00-  ಜಂಬೂ ಸವಾರಿಯ ದಿನ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮಹಿಷ ದಸರಾ ಆಚರಣಾ ಸಮಿತಿ ವಾಪಸ್ ಪಡೆದಿದೆ. ಮಹಿಷ ದಸರೆಗೆ ತಡೆಯೊಡ್ಡಿದ್ದರಿಂದ ಸಮಿತಿ ಸದಸ್ಯರು ಜಂಬೂಸವಾರಿಯ ದಿನ ಪ್ರತಿಭಟನೆ ನಡೆಸಿ, ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಬೆದರಿಕೆಯೊಡ್ಡಿದ್ದರು. ಪೂರ್ಣ ವಿವರ: https://bit.ly/33emrGN

10:40- ಮೈಸೂರಿನ ಅರಮನೆ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ವಿಜಯದಶಮಿ ದಿನದಂದು ತಾಯಿ ಚಾಮುಂಡೇಶ್ವರಿಯನ್ನು ಶಾಂತಪಡಿಸುವ ಸಲುವಾಗಿ, ಮಹಾರಾಜರ ಮೇಲಿನ ಸ್ವಾಮಿನಿಷ್ಠೆಯ ಪ್ರತೀಕವಾಗಿ ಹಾಗೂ ನಾಡಿನ ಸಮೃದ್ಧಿಗಾಗಿ ಜಟ್ಟಿಗಳು ವಜ್ರಮುಷ್ಟಿ ಕಾಳಗದಲ್ಲಿ ಪ್ರತಿ ವರ್ಷ ಭಾಗವಹಿಸುತ್ತಾರೆ. 

ಇದನ್ನೂ ಓದಿ: ಮೈಸೂರು ದಸರಾ ವೈಭವ: ಸಂಜೆ ವಿಶ್ವವಿಖ್ಯಾತ ಜಂಬೂಸವಾರಿ

10:00- ‘ಉಸ್ತುವಾರಿ ಸಚಿವ ಸೋಮಣ್ಣ ಅವರು ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಇಂದು ಮಧ್ಯಾಹ್ನ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಗಲಿದೆ. ಇಂದು ಸಂಜೆ ಮೈಸೂರಿಗೆ ರಾಜ್ಯಪಾಲರು ಆಗಮಿಸಲಿದ್ದಾರೆ. ಜಂಬೂಸವಾರಿ ಮೆರವಣಿಗೆ ವೇಳೆ ಎಲ್ಲರೂ ಶಾಂತ ರೀತಿಯಲ್ಲಿ ವರ್ತಿಸಿ.‘ ಎಂದು ಸುತ್ತೂರು ಮಠದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. 

9:55– ‘ಈಗಾಗಲೇ 40 ಲಕ್ಷಕ್ಕೂ ಹೆಚ್ವು ಜನ ಮೈಸೂರಿಗೆ ಬಂದು ಹೋಗಿದ್ದಾರೆ. ಜಂಬೂ ಸವಾರಿಗೆ ವಿಶೇಷ ರೀತಿಯಲ್ಲಿ ಏರ್ಪಾಡು ಮಾಡಲಾಗಿದೆ’ –ಮುಖ್ಯಮಂತ್ರಿ ಯಡಿಯೂರಪ್ಪ

9:15– ಚಾಮುಂಡಿ ಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾಮಠಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದರು. ಸ್ವಾಮೀಜಿ ಗದ್ದುಗೆಗೆ ಅವರು ವಿಶೇಷ ಸಲ್ಲಿಸಿದರು. ಮಠದ ಕೋಣೆಯಲ್ಲಿ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತುಕತೆ ನಡೆಸಿದರು. ಅನರ್ಹ ಶಾಸಕ ಎಚ್.ವಿಶ್ವನಾಥ್, ಸಚಿವ ನಾಗೇಶ್, ಕೊಳ್ಳೇಗಾಲ ಶಾಸಕ ಎನ್.ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮಠದಲ್ಲಿಯೇ ಮುಖ್ಯಮಂತ್ರಿ ಜತೆಗೆ ಉಪಾಹಾರ ಸೇವಿಸಿದರು.

ಇದನ್ನೂ ಓದಿ: ಮತ್ತೊಂದು ದಸರೆಯ ಉಸ್ತುವಾರಿ ಬೇಡಪ್ಪಾ...ಬೇಡ: ಸಚಿವ ಸೋಮಣ್ಣ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)