ಮೈಸೂರು ವಿವಿ: ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಬಡ್ತಿ

7

ಮೈಸೂರು ವಿವಿ: ಸಹಾಯಕ ಪ್ರಾಧ್ಯಾಪಕರಿಗೆ ಶೀಘ್ರ ಬಡ್ತಿ

Published:
Updated:

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಏಳು ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿರುವ ಅರ್ಹ ಉಪನ್ಯಾಸಕರಿಗೆ ಶೀಘ್ರವೇ ಬಡ್ತಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ, ‘170 ಮಂದಿ ಸಹಾಯಕ ಪ್ರಾಧ್ಯಾಪಕರಿಗೆ 2011ರಿಂದ ಯಾವುದೇ ಬಡ್ತಿ ನೀಡಿಲ್ಲ. ಈ ಪ್ರಾಧ್ಯಾಪಕರಿಗೆ ಬಡ್ತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ವರ್ಷದ ಹಿಂದೆಯೇ ಆದೇಶ ನೀಡಿತ್ತು. ಇದಕ್ಕೂ ವಿಶ್ವವಿದ್ಯಾಲಯ ಕಿಮ್ಮತ್ತು ನೀಡಿಲ್ಲ. ಸಿಂಡಿಕೇಟ್‌ ಸದಸ್ಯರು ಈ ಆದೇಶದ ವಿರುದ್ಧವೇ ತೀರ್ಮಾನ ಕೈಗೊಂಡಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘6 ಸಿಂಡಿಕೇಟ್‌ ಸದಸ್ಯರ ಪೈಕಿ ಮೂರು ಮಂದು ಪದವೀಧರರೇ ಅಲ್ಲ. ಅಂತಹವರನ್ನೂ ವಿಶ್ವವಿದ್ಯಾಲಯವು ಸ್ಲೆಟ್‌ ಪರೀಕ್ಷೆಯ ಉಸ್ತುವಾರಿಗೆ ನೇಮಿಸಿದೆ. ಈ ಪರೀಕ್ಷೆಗ ಹಾಜರಾಗಿದ್ದ ಕೆಲವು ವಿದ್ಯಾರ್ಥಿಗಳು ಈ ಪರೀಕ್ಷೆಯ ಪಾರದರ್ಶಕತೆಯ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದಾರೆ. ಎಲ್ಲ ವಿಷಯಗಳಲ್ಲೂ ಮೂಗು ತೂರಿಸುವ ಸಿಂಡಿಕೇಟ್‌ ಸದಸ್ಯರನ್ನು ವಜಾ ಮಾಡಬೇಕು’ ಎಂದು ಒತ್ತಾಯಿಸಿದರು. ಶತಮಾನೋತ್ಸವ ಆಚರಿಸಿದ ಈ ವಿಶ್ವವಿದ್ಯಾಲಯ ಒಂದು ವರ್ಷ ಐದು ತಿಂಗಳುಗಳಲ್ಲಿ ಈ ವಿಶ್ವವಿದ್ಯಾಲಯ 5 ಹಂಗಾಮಿ ಕುಲಪತಿಗಳನ್ನು ಕಂಡಿದೆ.  ಕಾಯಂ ಕುಲಪತಿಯನ್ನು ನೇಮಿಸಿ ಎಂದು ಒತ್ತಾಯಿಸಿದರು. 

ಜೆಡಿಎಸ್‌ನ ಶ್ರೀಕಂಠೇಗೌಡ, ‘ಈ ವಿಶ್ವವಿದ್ಯಾಲಯದಲ್ಲಿ ವಿಭಾಗ ಮುಖ್ಯಸ್ಥರನ್ನಾಗಿಯೂ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ತಿಂಗಳ ಒಳಗೆ ಆ ಭಾಗದ ವಿಧಾನ ಪರಿಷತ್‌ ಸದಸ್ಯರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳ ಜೊತೆ ಸಭೆ ನಡೆಸಿ ಈ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !