ಬಿಎಸ್‌ವೈ ಜತೆ ಮನಸ್ತಾಪ ಇಲ್ಲವೇ ಇಲ್ಲ, ಅನರ್ಹರಿಗೆ ಅನ್ಯಾಯ ಮಾಡಲ್ಲ: ನಳಿನ್

ಬೆಂಗಳೂರು: ಮುಖ್ಯಮಂತ್ರ ಬಿ. ಎಸ್. ಯಡಿಯೂರಪ್ಪ ಜತೆ ಮನಸ್ತಾಪ ಇಲ್ಲವೇ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಯಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ವಾಪಸ್ ತೆರಳುವ ವೇಳೆ ಪತ್ರಕರ್ತರ ಜತೆ ಮಾತನಾಡದೆ ತೆರಳಿದ್ದ ಅವರು ತುಸು ಹೊತ್ತಿನಲ್ಲಿ ಮತ್ತೆ ಅಲ್ಲಿಗಾಗಮಿಸಿದರು. ಬಳಿಕ ಮಾತನಾಡಿ, ‘ಮುಖ್ಯಮಂತ್ರಿ ಅವರೇ ನಮಗೆ ಮಾರ್ಗದರ್ಶಕರು. ಅವರ ಸಲಹೆಯಂತೆಯೇ ಪಕ್ಷದ ಸಂಘಟನೆ ನಡೆಯುತ್ತಿದೆ’ ಎಂದು ಹೇಳಿದರು.
ಇದನ್ನೂ ಓದಿ: ನಳಿನ್ರನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ?
ಅನರ್ಹ ಶಾಸಕರಿಗೆ ಅನ್ಯಾಯ ಮಾಡುವುದಿಲ್ಲ ಎಂದು ನಳಿನ್ ಸ್ಪಷ್ಟಪಡಿಸಿದರು.
‘ಅನರ್ಹ ಶಾಸಕರ ಕುರಿತು, ಅವರಿಗೆ ಹೇಗೆ ನ್ಯಾಯ ಕೊಡಬೇಕು ಎಂಬ ಬಗ್ಗೆ ನಾನು, ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಚರ್ಚಿಸಿ ನಿರ್ಧರಿಸಲಿದ್ದೇವೆ. ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಅವರು ಹೇಳಿದರು.
ಮಾತನಾಡದೆ ತೆರಳಿದ್ದಕ್ಕೆ ಸಮಜಾಯಿಷಿ: ‘ನಾನು 11.30ರ ವಿಮಾನದಲ್ಲಿ ಮಂಗಳೂರಿಗೆ ತೆರಳಬೇಕಿತ್ತು. ಅದಕ್ಕಾಗಿ ಧಾವಿಸಿ ಹೋದೆ, ನೀವು ಇಲ್ಲಿ ಕಾಯುತ್ತಿದ್ದುದೂ ಗೊತ್ತಾಗಲಿಲ್ಲ ಎಂದು ನಳಿನ್ ಸಮಜಾಯಿಷಿ ನೀಡಿದರು.
ಇನ್ನಷ್ಟು...
ಸಿಎಂ ಯಡಿಯೂರಪ್ಪ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ
ಸಿಎಂ ಬಿಎಸ್‌ವೈ – ಪಕ್ಷದ ಅಧ್ಯಕ್ಷ ಕಟೀಲ್ ನಡುವೆ ಮುಂದುವರೆದ ಮುಸುಕಿನ ಗುದ್ದಾಟ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.