ಶನಿವಾರ, ಅಕ್ಟೋಬರ್ 19, 2019
28 °C

ಸಿಎಂ ಯಡಿಯೂರಪ್ಪ ನಿವಾಸಕ್ಕೆ ನಳಿನ್‌ ಕುಮಾರ್ ಕಟೀಲ್ ಭೇಟಿ

Published:
Updated:

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದರು. ಇಬ್ಬರ ನಡುವೆ ಮನಸ್ತಾಪ ಇದೆ ಎಂಬ ವದಂತಿಗಳ ಹಿನ್ನೆಲೆ ಯಲ್ಲಿ ಈ ಭೇಟಿಗೆ ಮಹತ್ವ ದೊರೆತಿದೆ.

ಬಿಬಿಎಂಪಿ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಉಭಯ ನಾಯಕರಲ್ಲಿ ಮನಸ್ತಾಪ ಏರ್ಪಟ್ಟಿದೆ ಎನ್ನಲಾಗಿತ್ತು. ಬಹಿರಂಗ ಹೇಳಿಕೆಗಳ ಮೂಲಕವೂ ಅದು ಸಾಬೀತಾಗಿತ್ತು.

ಇದನ್ನೂ ಓದಿ: ಸಿಎಂ ಬಿಎಸ್‌ವೈ – ಪಕ್ಷದ ಅಧ್ಯಕ್ಷ ಕಟೀಲ್‌ ನಡುವೆ ಮುಂದುವರೆದ ಮುಸುಕಿನ ಗುದ್ದಾಟ

ಮಾತುಕತೆ ಬಳಿಕ ನಳಿನ್ ಅವರು ಸುದ್ದಿಗಾರರೊಂದಿಗೆ ಮಾತನಾಡಲಿದ್ದು, ತಮ್ಮ ನಿಲುವನ್ನು ಸ್ಪಷ್ಟಪಡಿಸುವ ನಿರೀಕ್ಷೆ ಇದೆ.

ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ಮಾತನಾಡಿದ್ದ ನಳಿನ್, ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ಮಾರ್ಗದರ್ಶನದಲ್ಲೇ ಮುಂದಕ್ಕೆ ಸಾಗುತ್ತಿರುವುದಾಗಿ ಅವರು ಹೇಳಿದ್ದರು.

Post Comments (+)