ಗುರುವಾರ , ಡಿಸೆಂಬರ್ 12, 2019
26 °C
ಸಾಲುಮರದ ತಿಮ್ಮಕ್ಕನ ಧ್ವನಿಗೆ ಸ್ಪಂದನೆ

ಕಣ್ಣುಬಿಟ್ಟ ನರಸಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕಳೆದ ಎರಡು ದಿನಗಳಿಂದ ಸರಿಯಾಗಿ ಚಿಕಿತ್ಸೆಗೆ ಸ್ಪಂದಿಸದಿದ್ದ ಸೂಲಗಿತ್ತಿ ನರಸಮ್ಮ ಅವರು  ಸಾಲು ಮರದ ತಿಮ್ಮಕ್ಕ ಅವರ ಧ್ವನಿ ಕೇಳಿದಾಕ್ಷಣ ಕಣ್ಣು ಬಿಟ್ಟು ಮಾತನಾಡಲು ಪ್ರಯತ್ನಿಸಿದರು.

‘ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಕೃತಕ ಉಸಿರಾಟ ನೀಡಿದ್ದರಿಂದ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆದರೆ ಬಿಜಿಎಸ್‌ ಆಸ್ಪತ್ರೆಗೆ ಅವರನ್ನು ನೋಡಲು ತಿಮ್ಮಕ್ಕ ಶನಿವಾರ ಬಂದಿದ್ದರು. ‘ನಾನು ತಿಮ್ಮಕ್ಕ ಬಂದಿದೀನಿ’ ಎಂದು ಅವರು ಹೇಳಿದಾಕ್ಷಣ ಕಣ್ಣುಬಿಟ್ಟರು. ತಿಮ್ಮಕ್ಕ ಅವರು ಅತ್ತಾಗ, ಕೈ ನೇವರಿಸಿ ಸಮಾಧಾನ ಮಾಡಿದರು’ ಎಂದು ನರಸಮ್ಮನವರ ಮಗ ಶ್ರೀರಾಮ್‌ ಭಾವುಕ ಕ್ಷಣವನ್ನು ವಿವರಿಸಿದರು. 

ಸರ್ಕಾರದಿಂದ ಸಹಾಯ: ಸೂಲಗಿತ್ತಿ ನರಸಮ್ಮ ಅವರ ಜೀವಿತಾವಧಿಯ ಆಸ್ಪತ್ರೆಯ ಖರ್ಚನ್ನು ಸಂಪೂರ್ಣವಾಗಿ ಸರ್ಕಾರ ವಹಿಸಿಕೊಳ್ಳಲಿದೆ. ಅವರಿಗೆ ಅತ್ಯಾಧುನಿಕ ಚಿಕಿತ್ಸೆ ಕೊಡಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಆದೇಶ ಹೊರಡಿಸಲಾಗಿದೆ.

ಪ್ರತಿಕ್ರಿಯಿಸಿ (+)