ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ತೆರಿಗೆ ಅಧಿಕಾರಿ ಬಳಿ ಭರ್ಜರಿ ಆಸ್ತಿ !

Last Updated 22 ಜೂನ್ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಂ.ಬಿ. ನಾರಾಯಣಸ್ವಾಮಿ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿದಂತೆ 14 ಸ್ಥಳಗಳ ಮೇಲೆ ಶುಕ್ರವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಭಾರಿ ಆಸ್ತಿಪಾಸ್ತಿ ಪತ್ತೆ ಹಚ್ಚಿದ್ದಾರೆ.

ನಾರಾಯಣಸ್ವಾಮಿ ಮತ್ತು ಅವರ ಕುಟುಂಬ ಸದಸ್ಯರು ಕೋಲಾರ ನಗರದಲ್ಲಿ 7560 ಚದರ ಮೀಟರ್‌ ವಿಸ್ತೀರ್ಣದ 3 ಅಂತಸ್ತಿನ ಮನೆ ಹೊಂದಿದ್ದಾರೆ.ಕೋಲಾರ, ಚಿಂತಾಮಣಿಯಲ್ಲಿ 45ಎಕರೆ ಕೃಷಿ ಜಮೀನು, ಬೆಂಗಳೂರಿನ ಮೇಡಹಳ್ಳಿಯಲ್ಲಿ 3 ನಿವೇಶನ, 123 ಗ್ರಾಂ ಚಿನ್ನ, 1,310 ಗ್ರಾಂ ಬೆಳ್ಳಿ, 2 ಟ್ರ್ಯಾಕ್ಟರ್‌, 3 ಕಾರುಗಳು, 10 ದ್ವಿಚಕ್ರ ವಾಹನ, ₹ 13.53 ಲಕ್ಷ ಮೊತ್ತದ ವಸ್ತುಗಳು ಇತರ ಜಮೀನಿನ ದಾಖಲೆ ಪತ್ತೆಯಾಗಿವೆ.

ಹಾಸನ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ ಎಚ್‌.ಎಸ್‌.ಚನ್ನೇಗೌಡ ಅವರು ತಮ್ಮ ಮತ್ತು ಕುಟುಂಬ ಸದಸ್ಯರ ಹೆಸರಿನಲ್ಲಿ 1 ಮನೆ ಹೊಂದಿದ್ದಾರೆ. 3 ನಿವೇಶನ, 3.6 ಕೃಷಿ ಜಮೀನು, 293 ಗ್ರಾಂ ಚಿನ್ನ, 2,484 ಗ್ರಾಂ ಬೆಳ್ಳಿ, 1 ಕಾರ್‌, 2 ದ್ವಿಚಕ್ರ ವಾಹನ, ₹ 15 ಲಕ್ಷದ ಎಲ್‌ಐಸಿ ಪಾಲಿಸಿ, 1 ಲಾಕರ್‌ ಮತ್ತು 10 ಲಕ್ಷದ ಗೃಹಪಯೋಗಿ ವಸ್ತುಗಳು ಸಿಕ್ಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT