ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಪಟ್ಟಿ ಅಸಿಂಧುಗೊಳಿಸಿ ಪ್ರಶಸ್ತಿಯ ಹೊಸ ಪಟ್ಟಿ ಬಿಡುಗಡೆ

ಜೀವಮಾನದ ಗೌರವ ಪ್ರಶಸ್ತಿಗೆ ಜಿ.ವಿ.ಶಾರದಾ ಆಯ್ಕೆ
Last Updated 4 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ನಾಟಕ ಅಕಾಡೆಮಿಯ ನಿರ್ಗಮಿತ ಕಾರ್ಯಕಾರಿ ಸಮಿತಿಯು ಘೋಷಣೆ ಮಾಡಿದ್ದ 2019-20ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪಟ್ಟಿಯನ್ನು ಅಸಿಂಧುಗೊಳಿಸಿರುವ ಈಗಿನ ಕಾರ್ಯಕಾರಿ ಸಮಿತಿ, ಹೊಸದಾಗಿ ಆಯ್ಕೆ ಮಾಡಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಈ ಹಿಂದಿನ ಸಮಿತಿ ಘೋಷಣೆ ಮಾಡಿದ್ದ ಎಲ್ಲ ಸಾಧಕರ ಹೆಸರನ್ನು ಕೈಬಿಡಲಾಗಿದೆ.

ಜೀವಮಾನ ಗೌರವ ಪ್ರಶಸ್ತಿಗೆ ಬೆಂಗಳೂರಿನ ಜಿ.ವಿ.ಶಾರದಾ ಅವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ.ಜೆ.ಲೋಕೇಶ್ ಅಧ್ಯಕ್ಷತೆಯ ಹಿಂದಿನ ಕಾರ್ಯಕಾರಿ ಸಮಿತಿಯು ಈ ಪ್ರಶಸ್ತಿಗೆಹಿರಿಯ ರಂಗಕರ್ವಿು ಉಮಾಶ್ರೀ ಅವರನ್ನು ಆಯ್ಕೆ ಮಾಡಿತ್ತು.

ಪರಮೇಶ್ವರ ಲೆಂಡೆ, ಜಕೀರ್ ನದಾಫ್, ನಾಗೇಂದ್ರ ಶಾ ಸೇರಿದಂತೆ 25 ರಂಗ ಸಾಧಕರು ವಾರ್ಷಿಕ ‘ರಂಗಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹಾಗೂ ಫಲಕವನ್ನು ಒಳಗೊಂಡಿದೆ. ‘ಕಲ್ಚರ್ಡ್‌ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಚಿತ್ರದುರ್ಗದ ಬಿ.ಮಲ್ಲಿಕಾರ್ಜುನ್, ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ಬೆಳಗಾವಿಯ ನಾಮದೇವ ನೂಲಿ, ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ’ಗೆ ಬೆಂಗಳೂರಿನ ಕೋಮಲಮ್ಮ ಕೊಟ್ಟೂರು ಹಾಗೂ ‘ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ’ಕ್ಕೆ ಧಾರವಾಡದ ಅರವಿಂದ ಕುಲಕರ್ಣಿ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 5 ಸಾವಿರ ನಗದು ಬಹುಮಾನ ಹಾಗೂ ಫಲಕಗಳನ್ನು ಹೊಂದಿದೆ.

ಹಿಂದಿನ ಕಾರ್ಯಕಾರಿ ಸಮಿತಿಯು ತನ್ನ ಕೊನೆಯ ದಿನ ಪಟ್ಟಿಯನ್ನು ಆತುರದಲ್ಲಿ ಪ್ರಕಟಿಸಿತ್ತು. ನಡಾವಳಿ ಮೀರಿ ಪ್ರಶಸ್ತಿಗಳನ್ನು ಆಯ್ಕೆ ಮಾಡಿರುವುದರಿಂದ ತಿರಸ್ಕರಿಸಲಾಯಿತು’ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ್ ತಿಳಿಸಿದರು.

ವಾರ್ಷಿಕ ರಂಗಪ್ರಶಸ್ತಿ ಪುರಸ್ಕೃತರು

ಹೆಸರು ಜಿಲ್ಲೆ

ಪರಮೇಶ್ವರ ಲೆಂಡೆ ಕಲಬುರ್ಗಿ

ಜಕೀರ್ ನದಾಫ್ ಬೆಳಗಾವಿ

ನಾಗೇಂದ್ರ ಶಾ ಬೆಂಗಳೂರು

ಕೆ.ಪಿ.ಪ್ರಕಾಶ್ ಬೆಂ.ಗ್ರಾಮಾಂತರ

ಡಾ.ಎಂ.ಬೈರೇಗೌಡ ರಾಮನಗರ

ಶಾಂತಮ್ಮ ಮಲಕಲ್ ಬಾಗಲಕೋಟೆ

‌ಮಂಜುಳಾ ಮಂಜುನಾಥ್ ತುಮಕೂರು

ಮಾಲೂರು ಸಿದ್ಧಪ್ಪ ಕೋಲಾರ

ಗಣಪತಿ ಹೆಗಡೆ ಉತ್ತರ ಕನ್ನಡ

ಜಂಬುನಾಥ್ ಚಿತ್ರದುರ್ಗ

ಸಿದ್ಧಲಿಂಗಪ್ಪ ತುಮಕೂರು

ಬಿ.ಎಲ್.ರವಿಕುಮಾರ್ ಚಿಕ್ಕಮಗಳೂರು

ನಾಗರಾಜಗೌಡ ಶಿವಮೊಗ್ಗ

ಶಾಡ್ರಾಕ ಹಾಸನ

ವಿಜಯ್‌ಕುಮಾರ್ ಕೋಡಿಯಾಲ್ ಮಂಗಳೂರು

ಭಾಸ್ಕರ್ ಮಣಿಪಾಲ್ ಉಡುಪಿ

ಸಂಗಮೇಶ ಬಾದಾಮಿ ವಿಜಯಪುರ

ಶಶಿಪ್ರಭಾ ಆರಾಧ್ಯ ಹುಬ್ಬಳ್ಳಿ

ಮಧುಕುಮಾರ್ ಹರಿಜನ್ ಹಾವೇರಿ

ಗುರುನಾಥ್ ಕೋಟೆ ಬೀದರ್

ರಮೇಶ್ ಹಂಚಿನಮನಿ ಬಳ್ಳಾರಿ

ಚನ್ನಬಸನಗೌಡ ಪಾಟೀಲ ಕುಲಕರ್ಣಿ ಧಾರವಾಡ

ಬಿ.ಎನ್.ಶಶಿಕಲಾ ಮೈಸೂರು

ಡಾ.ಎಂ.ಎಸ್.ವೇಣುಗೋಪಾಲ ಮೈಸೂರು

ಬಸವರಾಜ ಹೆಸರೂರು ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT