ನತಾನಿಯಾ ಲಾಜಿ ರಂಗಪ್ರವೇಶ

ಮಂಗಳವಾರ, ಜೂನ್ 18, 2019
24 °C

ನತಾನಿಯಾ ಲಾಜಿ ರಂಗಪ್ರವೇಶ

Published:
Updated:
Prajavani

ನೃತ್ಯಕ್ಷೇತ್ರದಲ್ಲಿ ಖ್ಯಾತರಾಗಿರುವ ಕಲಾವಿದ ಮಿಥುನ್ ಶ್ಯಾಂ ಅಪರೂಪದ ಕಲಾವಿದರಲ್ಲಿ ಒಬ್ಬರು. ಉತ್ತಮ ಶಿಕ್ಷಣಕ್ಕೆ ಹೆಸರಾದ ಇವರ ಗರಡಿಯಲ್ಲಿ ತರಬೇತಿ ಪಡೆದ ನತಾನಿಯಾ ಲಾಜಿ ಭರವಸೆಯ ಕಲಾವಿದೆಯಾಗುವ ಹಾದಿಯಲ್ಲಿದ್ದಾಳೆ. 

ಜೂನ್ 9ರಂದು ಬೆಳಿಗ್ಗೆ 10ಕ್ಕೆ ಎಡಿಎ ರಂಗಮಂದಿರದಲ್ಲಿ ನತಾನಿಯಾ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾರೆ.  ಶೀನಾ ಮತ್ತು ಲಾಜೀಶ್ ದಂಪತಿ ಮಗಳಾದ ನತಾನಿಯಾಗೆ ಬಾಲ್ಯದಿಂದಲೂ ನರ್ತನದಲ್ಲಿ ಒಲವು. ಪ್ರಸ್ತುತ ಮಿಥುನ್ ಶ್ಯಾಂ ಅವರಲ್ಲಿ ಕಲಿಯುತ್ತಿರುವ ನತಾನಿಯಾ, ‘ವೈಷ್ಣವಿ ನಾಟ್ಯಶಾಲಾ’ದ ಎಲ್ಲ ನೃತ್ಯರೂಪಕಗಳಲ್ಲೂ ಪ್ರಮುಖ ಭಾಗವಾಗಿದ್ದಾರೆ. ಈಗಾಗಲೇ ಐವತ್ತಕ್ಕೂ ಹೆಚ್ಚು ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. 

ಬೆಂಗಳೂರಿನ ‘ನ್ಯೂ ಹೊರೈಸನ್ ‘ ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ನತಾನಿಯಾ ನೃತ್ಯವಷ್ಟೇ ಅಲ್ಲ ಓದು ಮತ್ತು ಕ್ರೀಡೆಯಲ್ಲೂ ಮುಂದಿದ್ದಾರೆ. ಕರ್ನಾಟಕ ಸಂಗೀತ ಕಲಿಯುತ್ತಿರುವ ನತಾನಿಯಾ, ಪಾಶ್ಚಾತ್ಯ ಸಂಗೀತವನ್ನೂ ಬಲ್ಲವರು. 

ರಂಗಪ್ರವೇಶ: ಕಲಾವಿದೆ ನತಾನಿಯಾ ಲಾಜಿ. ಅತಿಥಿಗಳು–ಗೋಪಿಕಾ ವರ್ಮಾ, ಮಿಮಿಕ್ರಿ ದಯಾನಂದ್, ಅನಂತ ಕೃಷ್ಣನ್. ಆಯೋಜನೆ– ವೈಷ್ಣವಿ ನಾಟ್ಯಶಾಲಾ. ಸ್ಥಳ–ಎಡಿಎ ರಂಗಮಂದಿರ. ಜೆ.ಸಿ. ರಸ್ತೆ, ರವೀಂದ್ರ ಕಲಾಕ್ಷೇತ್ರದ ಎದುರು. ಜೂನ್ 9, ಬೆಳಿಗ್ಗೆ 10 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !