ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡ್ಸೆ ಹೊಗಳಿಕೆ ವಿವಾದ

Last Updated 17 ಮೇ 2019, 20:15 IST
ಅಕ್ಷರ ಗಾತ್ರ

ಸಾಧ್ವಿ ಪ್ರಜ್ಞಾ ಸಿಂಗ್ ಬಂಧಿಸಿ: ಖಂಡ್ರೆ

ಕಲಬುರ್ಗಿ: ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ನಾಥುರಾಂ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆ ನೀಡಿರುವ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸಬೇಕು.

ಪ್ರಜ್ಞಾ ಸಿಂಗ್ ಅವರು ಗಾಂಧಿ ಕೊಲೆಗಾರನನ್ನು ವೈಭವೀಕರಣ ಮಾಡುತ್ತಿದ್ದು, ಇದು ಖಂಡನೀಯ. ರಾಷ್ಟ್ರವಿರೋಧಿ ಕೃತ್ಯಗಳಿಗೆ ಬಿಜೆಪಿಯವರು ಬೆಂಬಲ ನೀಡುತ್ತಿದ್ದಾರೆ. ಸೋಲಿನ ಭೀತಿಯಿಂದ ಮತಗಳ ಧೃವೀಕರಣಕ್ಕೆ ಮುಂದಾಗಿದ್ದಾರೆ. ಪಶ್ಚಿಮ ಬಂಗಾಲ ಸೇರಿ ಹಲವಾರು ಕಡೆ ಧಂಗೆ ಏಳಿಸುವ ಕೆಲಸ ಮಾಡುತ್ತಿದ್ದಾರೆ.

– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

**

ಪ್ರಧಾನಿಯಿಂದಲೇ ಅವಹೇಳನ: ಪರಮೇಶ್ವರ್‌

ಕಲಬುರ್ಗಿ: ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000’ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಮಾಡಿರುವ ಟ್ವೀಟ್‌ ಅನ್ನು ನಾನು ಸರಿಯಾಗಿ ಗಮನಿಸಿಲ್ಲ. ರಾಜೀವ್ ಗಾಂಧಿ ಬಗ್ಗೆ ಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈಗ ಅವರ ಅನುಯಾಯಿಗಳು, ಸಂಸದರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕಟೀಲ್ ಅವರು ನಾಲಿಗೆ ಉದ್ದ ಮಾಡಿ, ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ.

‘ಆಧುನಿಕ ಭಾರತಕ್ಕೆ ರಾಜೀವ್ ಗಾಂಧಿ ಕೊಡುಗೆ ಅಪಾರವಾಗಿದೆ. ಕಟೀಲ್ ಅವರು ಟ್ವೀಟ್‌ ಡಿಲೀಟ್ ಮಾಡಿದರೂ ಏನೂ ಬದಲಾಗುವುದಿಲ್ಲ. ಇದರಿಂದ ಅವರ ಮನಸ್ಥಿತಿ ಅರ್ಥವಾಗುತ್ತದೆ’

– ಜಿ.ಪರಮೇಶ್ವರ್‌, ಉಪಮುಖ್ಯಮಂತ್ರಿ

**

‘ನಾಥೂರಾಮ್ ಗೋಡ್ಸೆ ದೇಶಭಕ್ತ’

ಕಲಬುರ್ಗಿ: ನಾಥೂರಾಮ್ ಗೋಡ್ಸೆ ದೇಶಭಕ್ತ. ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರದಂತ ಘಟನೆಗಳೇ ಗಾಂಧಿ ಹತ್ಯೆ ಮಾಡಲು ಗೋಡ್ಸೆಗೆ ಪ್ರೇರೇಪಿಸಿದ್ದವು.

ಗಾಂಧಿ ಹತ್ಯೆ ಮಾಡಿದವರು ನೇಣು ಕಂಬ ಏರಿದರು. ದೇಶ ತುಂಡರಿಸಿದವರು ಈ ದೇಶದ ಪ್ರಧಾನಿಯಾದರು. ದೇಶ ತುಂಡರಿಸಿದವರು ದೇಶ ಭಕ್ತರಾಗುವುದಾದರೆ ಗೋಡ್ಸೆಗೆ ಏಕೆ ದೇಶಭಕ್ತ ಎನ್ನಬಾರದು.

– ಸಿದ್ಧಲಿಂಗ ಸ್ವಾಮೀಜಿ, ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ

**

‘ಗೋಡ್ಸೆ ದೇಶಭಕ್ತ’ ಹೇಳಿಕೆಗೆ ಚೌಕೀದಾರ್ ಉತ್ತರಿಸಲಿ: ಓವೈಸಿ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್‌ ಗೋಡ್ಸೆ ದೇಶಭಕ್ತ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ನೀಡಿರುವ ಹೇಳಿಕೆ ಕುರಿತು ಚೌಕೀದಾರ್‌ (ಪ್ರಧಾನಿ ಮೋದಿ) ಉತ್ತರಿಸಬೇಕು.

ಮುಸ್ಲಿಮರ ಬಗ್ಗೆ ತಾರತಮ್ಯ ನೀತಿ ಅನುಸರಿಸುವವರು ದೇಶವಾಳುತ್ತಿದ್ದಾರೆ ಎಂದು ಹೆದರಬೇಕಾಗಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು, ಸಂವಿಧಾನದ ಪ್ರಕಾರವೇ ಆಡಳಿತ ನಡೆಯುತ್ತದೆ.

– ಅಸಾದುದ್ದೀನ್ ಓವೈಸಿ, ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT