ರಮಣರಾವ್‌ಗೆ ರಾಜ್ಯಪಾಲರಿಂದ ಶ್ಲಾಘನೆ

7
ಬ್ಯಾಡರಹಳ್ಳಿಯಲ್ಲಿ ಪ್ರತಿ ಭಾನುವಾರ ಉಚಿತ ವೈದ್ಯಕೀಯ ಸೇವೆ

ರಮಣರಾವ್‌ಗೆ ರಾಜ್ಯಪಾಲರಿಂದ ಶ್ಲಾಘನೆ

Published:
Updated:
Deccan Herald

ನೆಲಮಂಗಲ: ‘ನಲವತ್ತೈದು ವರ್ಷಗಳಿಂದ ಪ್ರತಿ ಭಾನುವಾರ ಬಡ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸುತ್ತಿರುವ ಡಾ.ರಮಣರಾವ್‌ ಅವರ ಸೇವೆ ಶ್ಲಾಘನೀಯ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿನಂದಿಸಿದರು.

ರಮಣರಾವ್‌ ಅವರು ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಬ್ಯಾಡರಹಳ್ಳಿಗೆ ಭೇಟಿ ನೀಡಿದ ಅವರು, ‘ಆರೋಗ್ಯಸೇವೆ ವ್ಯವಹಾರವಾಗಿ ಪರಿಣಮಿಸಿರುವ ಈ ಕಾಲದಲ್ಲಿ ಉಚಿತ ಆರೋಗ್ಯದ ಜೊತೆಗೆ ಒಂದು ದಿನದ ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ಕಲ್ಪಿಸುತ್ತಿರುವ ರಮಣರಾವ್‌ ಅವರು ವೈದ್ಯಲೋಕಕ್ಕೆ ಮಾದರಿಯಾಗಿದ್ದಾರೆ’ ಎಂದರು.

‘ಇಲ್ಲಿಗೆ ಬರುವ ರೋಗಿಗಳು ವೈದ್ಯರಿಗೆ ಹಾರೈಕೆಯ ಮಾತುಗಳನ್ನಾಡುವುದು ಕೇಳಿದಾಗ, ‘ವೈದ್ಯರು ಪ್ರತ್ಯಕ್ಷ ದೇವರು’ ಎನ್ನುವ ಮಾತನ್ನು ಸಾಕ್ಷೀಕರಿಸಿದ್ದಾರೆ ಎನ್ನುವ ಭಾವ ಮೂಡುತ್ತದೆ’ ಎಂದು ಹೇಳಿದರು. ಇವರ ಸೇವೆ ಇನ್ನೂ ಹೆಚ್ಚಿನ ಜನರಿಗೆ ಸಿಗಲಿ ಎಂದು ಹಾರೈಸಿ, ಅಲ್ಲಿನ ರೋಗಿಗಳಿಗೆ ಊರುಗೋಲುಗಳನ್ನು ವಿತರಿಸಿದರು.

ಡಾ.ರಮಣರಾವ್‌, ‘ಬಡವರ ಸೇವೆ ಮಾಡಬೇಕು ಎನ್ನುವ ನನ್ನ ಆಸೆಗೆ ಕುಟುಂಬ ವರ್ಗ, ಸ್ನೇಹಿತರು ಬೆಂಬಲವಾಗಿ ನಿಂತಿದ್ದಾರೆ. ನನ್ನ ಸೇವೆ ತಿಳಿದು ರಾಜ್ಯಪಾಲರು ಇಲ್ಲಿಗೆ ಬಂದು ಅಭಿನಂದಿಸಿರುವುದು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ಖುಷಿ ಹಂಚಿಕೊಂಡರು.

ಪ್ರತಿ ಭಾನುವಾರ ಬೆಳಗಿನಿಂದ ಸಂಜೆವರೆಗೆ ಉಚಿತ ಆರೋಗ್ಯ ತಪಾಸಣೆ, ಔಷಧಿ, ರಕ್ತ ಪರೀಕ್ಷೆ, ಇಸಿಜಿ, ಕಫ ನಿವಾರಣೆ, ಅಗತ್ಯವಿರುವವರಿಗೆ ಕನ್ನಡಕಗಳನ್ನು ಇಲ್ಲಿ ನೀಡಲಾಗುತ್ತದೆ. ದೂರದ ಊರುಗಳಿಂದ ಶನಿವಾರ ರಾತ್ರಿಯೇ ರೋಗಿಗಳು ಬರುವುದರಿಂದ ಅವರಿಗೆ ವಸತಿ, ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಇಲ್ಲಿ ಕಲ್ಪಿಸಲಾಗಿದೆ. 700 ರಿಂದ 1200 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !