ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ರಾಜ್ಯದಲ್ಲಿ ಸೋಮವಾರ 13 ವರ್ಷದ ಬಾಲಕ ಸೇರಿ 9 ಹೊಸ ಪ್ರಕರಣ ಪತ್ತೆ

Last Updated 27 ಏಪ್ರಿಲ್ 2020, 12:52 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 9 ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಇದರಿಂದಾಗಿ ರಾಜ್ಯದಲ್ಲಿ ಇದುವರೆಗೆ 512 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.ಸೋಂಕು ತಗುಲಿರುವವರಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 193 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಕೊರೊನಾ ಸೋಂಕಲ್ಲದ ಒಬ್ಬ ವ್ಯಕ್ತಿಮೃತಪಟ್ಟಿದ್ದಾರೆ.

9 ಹೊಸ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 13 ವರ್ಷದ ಬಾಲಕನಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈತ ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದಾಗಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಪಿ-504 ಎಂದು ಬಾಲಕನಿಗೆ ಸಂಖ್ಯೆ ನೀಡಲಾಗಿದೆ.


ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 50 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈತ ಮಹಾರಾಷ್ಟ್ರಕ್ಕೆ ಪ್ರಯಾಣ ಮಾಡಿದ ಹಿನ್ನೆಲೆಯಲ್ಲಿ ಈತನಿಗೆ ಸೋಂಕು ತಗುಲಿದೆ ಎಂದುಪತ್ತೆ ಹಚ್ಚಲಾಗಿದೆ. ಈತನನ್ನು ಪಿ-505 ಸಂಖ್ಯೆಯನ್ನು ಈತನಿಗೆ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ವರ್ಷ ವಯಸ್ಸಿನ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು ಈಗಾಗಲೆ ದಾಖಲಾಗಿರುವ ಪಿ-432 ಎಂಬ ಈತನ ಸಂಬಂಧಿಕರೊಬ್ಬರ ಸಂಪರ್ಕದಿಂದ ಬಂದ ಸೋಂಕು ಈತನನಿಕಟ ಸಂಪರ್ಕದಲ್ಲಿದ್ದ ಮಹಿಳೆಗೆ (ಪಿ-506)ಬಂದ ಕಾರಣ ಈತನಿಗೆ ಬಂದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಈತನನ್ನು ಪಿ-506 ಎಂದು ಗುರುತಿನ ಸಂಖ್ಯೆ ನೀಡಲಾಗಿದೆ.ದಕ್ಷಿಣ ಕನ್ನಡದ ಮತ್ತೊಂದು ಸೋಂಕು ಪ್ರಕರಣ 80 ವರ್ಷದ ವೃದ್ದೆ ಎಂದು ಗುರುತಿಸಲಾಗಿದೆ. ಹಿನ್ನೆಲೆ ಪತ್ತೆ ಹಚ್ಚಿದಾಗ ಈಕೆ ಈಗಾಗಲೇ ಸೋಂಕು ತಗುಲಿ ದಾಖಲಾಗಿರುವ 432ರ ಸಂಪರ್ಕದಲ್ಲಿದ್ದರು ಎಂದುಪತ್ತೆಹಚ್ಚಲಾಗಿದೆ. ಈ ವೃದ್ದೆಗೆ 507 ಎಂದು ಗುರುತು ನೀಡಲಾಗಿದೆ.ಜಮಖಂಡಿಯಲ್ಲಿ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದಾಗಿ ವರದಿಯಾಗಿದೆ. ವೈದ್ಯಾಧಿಕಾರಿಗಳು ಹಿನ್ನೆಲೆ ಪತ್ತೆ ಹಚ್ಚಿದಾಗಈ ಮಹಿಳೆ ಈಗಾಗಲೇ ದಾಖಲಾಗಿರುವ ಪಿ-456 ಸಂಖ್ಯೆಯ ಸೋಂಕಿತರ ಸಂಪರ್ಕದಲ್ಲಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಜಮಖಂಡಿಯಲ್ಲಿ 21 ವರ್ಷದ ಯುವತಿಗೆ ಸೋಂಕು ತಗುಲಿದೆ. ಈಕೆ ಈಗಾಗಲೆ ಸೋಂಕು ತಗುಲಿರುವ ಪಿ-456 ಸಂಖ್ಯೆಯ ಸೋಂಕಿತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.ವಿಜಯಪುರದಲ್ಲಿ ಮತ್ತೊಂದು ಸೋಂಕು ಪ್ರಕರಣ ದಾಖಲಾಗಿದೆ. 45 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಈತ ಈಗಾಗಲೆ ಸೋಂಕು ತಗುಲಿರುವ ಪಿ-221 ಎಂಬ ವ್ಯಕ್ತಿ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ವಿಜಯಪುರದಲ್ಲಿಯೇ 27 ವರ್ಷ ವಯಸ್ಸಿನ ವ್ಯಕ್ತಿಗೆ ಸೋಂಕು ತಗುಲಿದೆ. ಈತನಿಗೆ ಸೋಂಕು ಹೇಗೆ ತಗುಲಿತು ಎಂಬುದನ್ನು ವೈದ್ಯರು ಪತ್ತೆಹಚ್ಚುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 22 ವರ್ಷದ ಯುವತಿಗೆ ಸೋಂಕು ತಗುಲಿದೆ. ಈಕೆ ಪಿ-371 ಸಂಖ್ಯೆಯ ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ ಕಾರಣ ಇವರಿಗೂ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

50 ವರ್ಷದ ಪುರುಷ ಬೆಂಗಳೂರು ನಿವಾಸಿ ಕೋವಿಡ್ 19ರ ಸೋಂಕಿತ ಏಪ್ರಿಲ್ 24 ರಂದು ನಿಗದಿತ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಇವರು ರಕ್ತದೊತ್ತಡ ಮತ್ತು ಹೆಪಿಟೈಟಸ್ ಸಿ ನಿಂದ ಬಳಲುತ್ತಿದ್ದರು.ಹಾಗೂ ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಡಯಾಲಿಸಿಸ್ ಸೇವೆಯನ್ನು ಪಡೆಯುತ್ತಿದ್ದರು. ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇದು ಕೊವಿಡ್ 19 ಅಲ್ಲದ ಅನ್ಯಕಾರಣದ ಸಾವು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT