ಶಿಕ್ಷಕರ ನೇಮಕಾತಿ: ಹೊಸ ಅಂಕ ಪಟ್ಟಿ ಪ್ರಕಟ

7

ಶಿಕ್ಷಕರ ನೇಮಕಾತಿ: ಹೊಸ ಅಂಕ ಪಟ್ಟಿ ಪ್ರಕಟ

Published:
Updated:

ಬೆಂಗಳೂರು: ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಆಯ್ಕೆ ಪಟ್ಟಿಯಲ್ಲಿ ಆಗಿದ್ದ ಗೊಂದಲಗಳನ್ನು ನಿವಾರಿಸಲು ಶಿಕ್ಷಣ ಇಲಾಖೆ ಪರಿಷ್ಕೃತ ಅಂಕಪಟ್ಟಿಯನ್ನು ಪ್ರಕಟಿಸಿದೆ.

ಈ ಮೊದಲು ಇಲಾಖೆ ಪ್ರಕಟಿಸಿದ್ದ ಪಟ್ಟಿಯಲ್ಲಿ ಎಲ್ಲಾ ಅಭ್ಯರ್ಥಿಗಳ ಅಂಕಗಳ ವಿವರ ಎಲ್ಲರಿಗೂ ಗೋಚರವಾಗುತ್ತಿತ್ತು. ಆದರೆ, ಈ ಬಾರಿ ಅಭ್ಯರ್ಥಿಯಷ್ಟೇ ಅಂಕಗಳನ್ನು ನೋಡಲು ಸಾಧ್ಯವಾಗಲಿದೆ. ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿಯೇ ಅಂಕಗಳನ್ನು ನೋಡಬೇಕು.

2017–18ರ ಸರ್ಕಾರಿ ಪ್ರಾಥಮಿಕ ಶಾಲೆಗಳ ಪದವೀಧರ ಪ್ರಾಥಮಿಕ ಶಿಕ್ಷಕ (6ರಿಂದ 8ನೇ ತರಗತಿ) ನೇಮಕಾತಿಯ ಪರೀಕ್ಷೆಗೆ 68,832 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 55,249 ಮಂದಿ ಪರೀಕ್ಷೆ ಹಾಜರಾಗಿದ್ದರು. ತಪ್ಪಾಗಿ ಮಾಹಿತಿ ನಮೂದಿಸಿರುವ ಕಾರಣ 212 ಅಭ್ಯರ್ಥಿಗಳ ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಇಲಾಖೆ ತಿಳಿಸಿದೆ.

ಅಭ್ಯರ್ಥಿಗಳು www.schooleducation.kar.nic.in ವೆಬ್‌ಸೈನಲ್ಲಿ ಅಂಕಗಳನ್ನು ವೀಕ್ಷಿಸಬಹುದಾಗಿದೆ. ಏನಾದರೂ ಆಕ್ಷೇಪಣೆ ಇದ್ದಲ್ಲಿ ಏಳು ದಿನಗಳ ಒಳಗೆ ಆನ್‌ಲೈನ್‌ ಮೂಲಕ ಸಲ್ಲಿಸಬಹುದು. 

‘873 ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ, ಬಿ.ಎಡ್‌ ಹಾಗೂ ಡಿ.ಎಡ್‌ ವಿದ್ಯಾರ್ಹತೆಯ ಗರಿಷ್ಠ ಅಂಕ ಹಾಗೂ ಪಡೆದಿರುವ ಅಂಕಗಳನ್ನು ತಪ್ಪಾಗಿ ನಮೂದಿಸಿದ್ದಾರೆ. ಇದನ್ನು ನಾವು ತಿದ್ದಲು ಆಗುವುದಿಲ್ಲ. ಅರ್ಹರಿಗೆ ಅವಕಾಶ ತಪ್ಪಬಾರದೆಂದು ಅದನ್ನು ಸರಿಪಡಿಸಲು ಸಹ ಅವಕಾಶ ನೀಡಲಾಗಿದೆ. ಆ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್‌ಸೈನಲ್ಲಿ ಪ್ರಕಟಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ತಿಳಿಸಿದರು.

‘ಈ ಹಿಂದಿನ ಬಾರಿ ಸಾರ್ವಜನಿಕವಾಗಿ ಪ್ರಕಟಿಸಿದ್ದರಿಂದ ಬೇರೆಯವರ ಅಂಕಗಳನ್ನು ಗಮನಿಸುವವರ ಸಂಖ್ಯೆಯೇ ಹೆಚ್ಚಾಗಿದ್ದರಿಂದ ಈ ಬಾರಿ ವೈಯುಕ್ತಿಕ ಅಂಕಗಳನ್ನು ಮಾತ್ರ ಪ್ರಕಟಿಸಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !