ಸಮುದ್ರದಾಳದಲ್ಲಿ ಗುರುತಿನ ಚೀಟಿ ವಿತರಣೆ

ಶನಿವಾರ, ಮೇ 25, 2019
32 °C

ಸಮುದ್ರದಾಳದಲ್ಲಿ ಗುರುತಿನ ಚೀಟಿ ವಿತರಣೆ

Published:
Updated:
Prajavani

ಕಾರವಾರ:‌ ಉತ್ತರ ಕನ್ನಡ ಜಿಲ್ಲೆಯ ನಾಲ್ವರು ಯುವ ಮತದಾರರು ಭಟ್ಕಳದ ನೇತ್ರಾಣಿ ನಡುಗಡ್ಡೆಯ ಸಮೀಪ ಸ್ಕೂಬಾ ಡೈವಿಂಗ್‌ ಮಾಡುತ್ತಲೇ ಸಮುದ್ರದಲ್ಲಿ ಭಾನುವಾರ ಅಧಿಕಾರಿಗಳಿಂದ ಗುರುತಿನ ಚೀಟಿ ಪಡೆದುಕೊಂಡರು.

ಜಿಲ್ಲಾಡಳಿತ ಯುವ ಮತದಾರರಿಗಾಗಿ ಈ ವ್ಯವಸ್ಥೆ ಮಾಡಿತ್ತು. ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ವಿನಾಯಕ ನಾಯಕ, ಮುಟ್ಟಳ್ಳಿಯ ರೂಪೇಶ ನಾಯ್ಕ, ಮಾವಳ್ಳಿಯ ವಿಘ್ನೇಶ ದೇವಾಡಿಗ ಹಾಗೂ ಗಣೇಶ ದೇವಾಡಿಗ ಅವರು ಈ ವೇಳೆ ಗುರುತಿನ ಚೀಟಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಕುಮಟಾ ಉಪವಿಭಾಗಾಧಿಕಾರಿ ಪ್ರೀತಿ ಗೆಲೋಟ್, ಪ್ರೊಬೆಷನರಿ ಐಎಎಸ್ ಅಧಿಕಾರಿ ದಿಲಿಶ್ ಸಸಿ, ಪ್ರೊಬೆಷನರಿ ಐಪಿಎಸ್ ಅಧಿಕಾರಿಗಳಾದ ತುಷಾರ್ ದುಡಿ ಹಾಗೂ ಪಿ.ಶ್ರೇಷ್ಠ ಅವರೂ ಸ್ಕೂಬಾ ಡೈವ್ ಮಾಡಿದರು.

‘ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ’ ಎಂದು ಈ ವೇಳೆ ಡಾ.ಕೆ.ಹರೀಶಕುಮಾರ್ ಹಾಗೂ ಮೊಹಮ್ಮದ್ ರೋಷನ್ ಹೇಳಿದರು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !