ಅಪಘಾತ: ಜಗಳೂರಿನ ನವವಿವಾಹಿತನ ಸಾವು

7

ಅಪಘಾತ: ಜಗಳೂರಿನ ನವವಿವಾಹಿತನ ಸಾವು

Published:
Updated:
ಶಾಂತಕುಮಾರ್‌

ದಾವಣಗೆರೆ: ಜಗಳೂರು ತಾಲ್ಲೂಕಿನ ಲಕ್ಕಂಪುರ ಬಳಿ ಸೋಮವಾರ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನವವಿವಾಹಿತ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಹೊಸಕೆರೆ ಗ್ರಾಮದ ಶಾಂತಕುಮಾರ್‌ (36) ಮೃತರು. ರಶ್ಮಿ, ವೀರೇಶ್‌, ಚೇತನಾ ಹಾಗೂ ಚಾಲಕ ಸುನಿಲ್‌ಕುಮಾರ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಂತಕುಮಾರ್‌ ಅವರ ವಿವಾಹವು ರಶ್ಮಿ ಜೊತೆ ಹಾಗೂ ಅವರ ಸಹೋದರ ವೀರೇಶ್‌ ವಿವಾಹವು ಚೇತನಾ ಜೊತೆ ಭಾನುವಾರವಷ್ಟೇ ನಡೆದಿತ್ತು.  ನವ ಜೋಡಿಯು ದೇವರ ದರ್ಶನ ಪಡೆಯಲು ಉಜ್ಜಯಿನಿ ದೇವಸ್ಥಾನಕ್ಕೆ ಜಗಳೂರು–ಕೊಟ್ಟೂರು ಮಾರ್ಗವಾಗಿ ಹೊರಟಿತ್ತು. ಎದುರಿಗೆ ಬಂದ ಎಮ್ಮೆಯನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ತೀವ್ರ ಗಾಯಗೊಂಡ ಶಾಂತಕುಮಾರ್‌ ಕೊನೆಯುಸಿರೆಳೆದಿದ್ದಾರೆ.

ಒಂದು ದಿನದ ಹಿಂದೆಷ್ಟೇ ವಿವಾಹ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸಾವಿನ ಸುದ್ದಿ ಕುಟುಂಬದವರಿಗೆ ಸಿಡಿಲು ಅಪ್ಪಳಿಸಿದಂತಾಗಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !