ಕೊಡಗಿನಲ್ಲಿ ರೇವ್‌ ಪಾರ್ಟಿ: ಐವರ ಬಂಧನ

7

ಕೊಡಗಿನಲ್ಲಿ ರೇವ್‌ ಪಾರ್ಟಿ: ಐವರ ಬಂಧನ

Published:
Updated:
Prajavani

ಮಡಿಕೇರಿ: ಕೊಡಗು ಜಿಲ್ಲೆಯ ನಾಪೋಕ್ಲು ಪೊಲೀಸ್‌ ಠಾಣಾ ವ್ಯಾಪ್ತಿಯ ನೆಲಜಿ ಗ್ರಾಮದ ಗ್ಲಾಂಪಿಂಗ್‌ ಹೋಂಸ್ಟೇಯಲ್ಲಿ ರೇವ್‌ ಪಾರ್ಟಿ ಆಯೋಜಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜೂಡ್‌ ಪರೇರ, ಮುಂಬೈನ ಶಂಕರ್‌ ಶಾಂತನು, ಬೆಂಗಳೂರು ಕೇಂಬ್ರಿಡ್ಜ್‌ ಲೇಔಟ್‌ನ ಸಾಯಿರಾಮ್‌ ರಮೇಶ್‌, ಬೆಂಗಳೂರು ಮತ್ತಿಕೆರೆ ನಿವಾಸಿ ಎಂ.ವಿ. ಈಶ್ವರ್‌, ಹೋಂಸ್ಟೇ ಮಾಲೀಕ ಮಾಳೆಯಂಡ ಎ. ಅಪ್ಪಣ್ಣ ಅವರು ಬಂಧಿತರು.

ಬಂಧಿತರಿಂದ 29 ಗ್ರಾಂ ಚರಸ್‌, ಹುಕ್ಕ ಸೇದಲು ಬಳಸುವ ಮೂರು ಸಾಧನ, ಗಾಂಜಾ ಪುಡಿ ಮಾಡಲು ಬಳಸುವ ಮೂರು ಸಾಧನ, ರೇವ್‌ ಪಾರ್ಟಿಗೆ ಬಳಸುತ್ತಿದ್ದ ಸಂಗೀತ ಪರಿಕರ, ಜನರೇಟರ್‌, ಒಂದು ಮಿನಿ ಲಾರಿ, ಸಿಗರೇಟ್‌ ತಯಾರಿಸಲು ಉಪಯೋಗಿಸುವ ಪೇಪರ್‌, ₹ 1.75 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯ ಕೆಲವು ಹೋಂಸ್ಟೇಗಳಲ್ಲಿ ರೇವ್‌ ಪಾರ್ಟಿ ನಡೆಸುತ್ತಿರುವ ಬಗ್ಗೆ ದೂರು ಬಂದಿತ್ತು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಗ್ಲಾಂಪಿಂಗ್‌ ಹೋಂಸ್ಟೇಯಲ್ಲಿ ಮುಂಬೈ, ಪುಣೆ ಹಾಗೂ ಬೆಂಗಳೂರಿನ ವ್ಯಕ್ತಿಗಳು ಶಾಮೀಲಾಗಿ ರೇವ್‌ ಪಾರ್ಟಿ ನಡೆಸುತ್ತಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ. ಪೆನ್ನೇಕರ್‌ ನೇತೃತ್ವದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿ ಆರೋಪಿಗಳು ಬಂಧಿಸಲು ಯಶಸ್ವಿ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !