ಕಾಫಿ ತೋಟಕ್ಕೆ ಸ್ಪಿಂಕ್ಲರ್ ಮೂಲಕ ನೀರು

ಭಾನುವಾರ, ಮಾರ್ಚ್ 24, 2019
32 °C
ಮಳೆ ನಿರೀಕ್ಷೆಯಲ್ಲಿ ಕಾಫಿ ಬೆಳೆಗಾರರು

ಕಾಫಿ ತೋಟಕ್ಕೆ ಸ್ಪಿಂಕ್ಲರ್ ಮೂಲಕ ನೀರು

Published:
Updated:
Prajavani

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮೊದಲ ಮಳೆ ಸುರಿದು ಮೂರು ವಾರ ಕಳೆದಿದ್ದು ರೈತರು ಬ್ಯಾಕಿಂಗ್ ಮಳೆ ನಿರೀಕ್ಷೆಯಲ್ಲಿದ್ದಾರೆ. ವಿವಿಧೆಡೆ ಸಕಾಲದಲ್ಲಿ ಕಾಫಿ ತೋಟಗಳಲ್ಲಿ ಹೂಗಳು ಅರಳಿದ್ದು ಮಿಡಿಕಚ್ಚಲು ಮಳೆ ಅಗತ್ಯವಿದೆ.

ಮಳೆ ನಿರೀಕ್ಷೆಯಲ್ಲಿ ಬೆಳೆಗಾರರು ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ. ಕೆಲವರು ಹೊಳೆಮ ಕೆರೆಗಳಿಂದ ಕಾಫಿ ತೋಟಗಳಿಗೆ ನೀರು ಹಾಯಿಸಲು ಸಿದ್ಧತೆ ನಡೆಸಿದ್ದು, ಹಲವೆಡೆ ಸ್ಪಿಂಕ್ಲರ್ ಬಳಕೆಯೂ ನಡೆದಿದೆ.

ಬೇತು, ಕೈಕಾಡು, ಪಾರಾಣೆ, ಹೊದ್ದೂರು, ನೆಲಜಿ ಸೇರಿ ವಿವಿಧೆಡೆ ಸಕಾಲದಲ್ಲಿ ಹೂಮಳೆಯಾಗಿದೆ. ಬಲ್ಲಮಾವಟಿ, ಪೇರೂರು, ಪುಲಿಕೋಟು ಭಾಗಗಳಲ್ಲಿ ಮೊದಲ ಮಳೆಯ ನಿರೀಕ್ಷೆಯಿದೆ.

ಕಾಫಿ ಹೂಗಳು ಅರಳಲು ಇದು ಸಕಾಲ. ಬಿಸಿಲ ಕಾವು ಏರುತ್ತಿದ್ದು ಎರಡು ದಿನಗಳಿಂದ ಮೋಡ ಕಂಡಿರುವುದು ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ.

ಪ್ರತಿವರ್ಷ ಕಾಫಿ ಬೆಳೆಗೆ ಫೆಬ್ರುವರಿ– ಮಾರ್ಚ್‌ ತಿಂಗಳಲ್ಲಿ ಹೂಮಳೆ ಅವಶ್ಯಕ. ಉತ್ತಮ ಮಳೆಯಾದಲ್ಲಿ ಫಸಲು ನಿಶ್ಚಿತ. ಅಂತೆಯೇ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿರುತ್ತಾರೆ.

ನಿರೀಕ್ಷಿತ ಮಳೆಯಾಗದಿದ್ದಲ್ಲಿ ಸ್ಪಿಂಕ್ಲರ್ ಸೇರಿ ಪರ್ಯಾಯ ಬಳಕೆ ಅನಿವಾರ್ಯ. ಇದು ಪ್ರತಿವರ್ಷದ ಪ್ರಕ್ರಿಯೆ. ಸಣ್ಣ ಮತ್ತು ಮಧ್ಯಮ ಬೆಳೆಗಾರರು ಮೊದಲ ಹೂಮಳೆಯಿಂದ ಈ ವರ್ಷದ ಮಟ್ಟಿಗೆ ಸಂತಸಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !