ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸ್‌ ರೈತರಿಗೆ ಕೊಟ್ಟಿದ್ದು ₹ 8 ಲಕ್ಷ, ಮಾರಿದ್ದು ₹ 21 ಕೋಟಿಗೆ!

ಬಿಎಂಐಸಿ ಯೋಜನೆಯಿಂದ ಖೇಣಿ ಸಂಸ್ಥೆಗೆ ಅತ್ಯಧಿಕ ಲಾಭ– ಐಎಸ್‌ಇಸಿ ವರದಿ
Last Updated 9 ನವೆಂಬರ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌’ (ನೈಸ್) ಬೆಂಗಳೂರು– ಮೈಸೂರು ಹೆದ್ದಾರಿ ಯೋಜನೆಯಲ್ಲಿ (ಬಿಎಂಐಸಿಎಲ್‌) ಒಪ್ಪಿತ ಪ್ರಮಾಣಕ್ಕಿಂತಲೂ ಶೇ 650ರಷ್ಟು ಲಾಭ ಮಾಡುತ್ತಿದೆ ಎಂದು ಸಾಮಾಜಿಕ– ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ಐಎಸ್‌ಇಸಿ) ಸಮೀಕ್ಷೆ ಹೇಳಿದೆ.

ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ನೈಸ್‌ ಅತಿಯಾದ ಲಾಭ ಮಾಡಿಕೊಂಡಿದೆ. ಒಪ್ಪಿತ ಒಪ್ಪಂದದ ಅನ್ವಯ ಯೋಜನೆ ಮುಗಿಯುವ ವೇಳೆಗೆ ನೈಸ್‌ಶೇ 17.52ರಷ್ಟು ಲಾಭ ಪಡೆಯಬೇಕಿತ್ತು. ಶೇ 135ರಷ್ಟು ಲಾಭ ಮಾಡುತ್ತಿದೆ ಎಂದು ತಿಳಿಸಿದೆ.

ಅತಿಯಾದ ಟೋಲ್‌ ವಸೂಲಿ (ರಾಷ್ಟ್ರೀಯ ಹೆದ್ದಾರಿಯ ಮೂಲ ಶುಲ್ಕಕ್ಕಿಂತ ಶೇ 342ರಷ್ಟು ಅಧಿಕ) ಹಾಗೂ ಹೆಚ್ಚುವರಿ ಭೂಮಿಯನ್ನು ರಿಯಲ್‌ ಎಸ್ಟೇಟ್‌ಗೆ ಬಳಸಿಕೊಳ್ಳುವ ಮೂಲಕ ಅತ್ಯಧಿಕ ಲಾಭ ಮಾಡಿದೆ. ಅಲ್ಲದೆ, ಯೋಜನೆ ಜಾರಿಗೊಂಡಿರುವ 60 ಗ್ರಾಮಗಳ ಜನರ ಪುನರ್ವಸತಿ ಯೋಜನೆಯೂ ಪೂರ್ಣಗೊಂಡಿಲ್ಲ ಎಂದು ವರದಿ ವಿವರಿಸಿದೆ.

ಯೋಜನೆಗೆ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಗಣಿಗಾರಿಕೆ ನಡೆಸುವ ಮೂಲಕವೂ ಲಾಭ ಮಾಡಲಾಗಿದೆ. ಗೊಲ್ಲಹಳ್ಳಿಯಲ್ಲಿ ನಡೆಸಿರುವ ಗಣಿಗಾರಿಕೆಯಿಂದ ₹ 240 ಕೋಟಿ ಲಾಭ ಗಳಿಸಲಾಗಿದೆ ಎಂದು ಸಂಸ್ಥೆಯ ಸಹ ಪ್ರಾಧ್ಯಾಪಕ ಕೃಷ್ಣರಾಜ್‌ ಹೇಳಿದ್ದಾರೆ. ಗಣಿ ಹಾಗೂ ಭೂವಿಜ್ಞಾನ ಇಲಾಖೆ ನಡೆಸಿರುವ ಅಧ್ಯಯನವನ್ನೂ ಅವರು ಉಲ್ಲೇಖಿಸಿದ್ದಾರೆ.

ಈ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಮುಖ ಅಂಶಗಳನ್ನು ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿಗೆ ಸಲ್ಲಿಸಲಾಗಿತ್ತು. ಹಣಕಾಸಿನ ವಿಶ್ಲೇಷಣೆ ಹಾಗೂ ಒಪ್ಪಂದ ರದ್ದತಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಸಮಿತಿಗೆ ನೀಡಿರಲಿಲ್ಲ. ಈ ಅಂಶಗಳನ್ನು ಸಂಸ್ಥೆಯ ವರದಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ರೈತರ ಜಮೀನಿಗೆ ಪ್ರತಿ ಎಕರೆ ಜಮೀನಿಗೆ ₹ 8 ಲಕ್ಷ ಪರಿಹಾರ ನೀಡಲಾಗಿದೆ. ಅದೇ ಜಮೀನನ್ನು ಚದರ ಅಡಿ ಲೆಕ್ಕದಲ್ಲಿ ಪ್ರತಿ ಚದರಡಿಗೆ ₹ 5 ಸಾವಿರ ದರದಲ್ಲಿ ನೈಸ್‌ ಮಾರಾಟ ಮಾಡಿದೆ. ಇದರಿಂದಾಗಿ ಎಕರೆ ಭೂಮಿಗೆ ₹ 21 ಕೋಟಿ ಲಾಭ ಮಾಡಿದಂತಾಗಿದೆ. ಪೆರಿಫೆರಲ್‌ ರಸ್ತೆ, ಲಿಂಕ್‌ ರಸ್ತೆ ಹಾಗೂ ಇಂಟರ್‌ಚೇಂಜ್‌ ರಸ್ತೆಗೆ ಬೇಕಾದ ಜಮೀನು 1,479 ಎಕರೆ. ಆದರೆ, ವಶಪಡಿಸಿಕೊಂಡಿದ್ದು 2,471 ಎಕರೆ ಎಂದು ವರದಿ ಸ್ಪಷ್ಟಪಡಿಸಿದೆ.

ಅತಿಯಾದ ಲಾಭದಿಂದಾಗಿ ಕಂಪನಿ ಈಗಾಗಲೇ ಯೋಜನೆಗೆ ಹೂಡಿರುವ ಬಂಡವಾಳವನ್ನು ವಾಪಸ್‌ ಸಂಪಾದಿಸಿದೆ. ಮುಂದಿನ 24 ವರ್ಷದಲ್ಲಿ ಅದು ಭಾರಿ ಲಾಭ ಗಳಿಸಲಿದೆ ಎಂದೂ ವರದಿ ಉಲ್ಲೇಖಿಸಿದೆ.

ಷರತ್ತು ನಿಗದಿಪಡಿಸಿಲ್ಲ: ‘ರಾಜ್ಯ ಸರ್ಕಾರದ ಜೊತೆ ತಾನು ಸಹಿ ಮಾಡಿರುವ ಯೋಜನೆಯ ಮೂಲ ಒಪ್ಪಂದದಲ್ಲಿ ಲಾಭ ಗಳಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರಮಾಣವನ್ನು ನಿಗದಿಪಡಿಸಿಲ್ಲ ಅಥವಾ ಯಾವುದೇ ಷರತ್ತನ್ನು ನಿಗದಿಪಡಿಸಿಲ್ಲ’ ಎಂದು ನೈಸ್‌ ಸಂಸ್ಥೆಯ ಪ್ರತಿನಿಧಿ ಪ್ರತಿಕ್ರಿಯೆ ನೀಡಿದ್ದಾರೆ.

‘1998ರಲ್ಲಿ ಸೋಮಶೇಖರ ರೆಡ್ಡಿ ಹಾಗೂ ಮಾಧುಸ್ವಾಮಿ 2005ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಇದೇ ಪ್ರಶ್ನೆಗಳನ್ನು ಎತ್ತಿದ್ದರು. ಕೋರ್ಟ್‌ ಈ ಅರ್ಜಿಗಳನ್ನು ತಿರಸ್ಕರಿಸಿತ್ತು. ಅಲ್ಲದೆ, ಅರ್ಜಿದಾರರಿಗೆ ದಂಡವನ್ನೂ ಹಾಕಿತ್ತು’ ಎಂದೂ ಅವರು ಹೇಳಿದ್ದಾರೆ.

ಈ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಮುಖ ಅಂಶಗಳನ್ನು ನೈಸ್‌ ಯೋಜನೆಗೆ ಸಂಬಂಧಿಸಿದಂತೆ ಹಿಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿಗೆ ಸಲ್ಲಿಸಲಾಗಿತ್ತು. ಹಣಕಾಸಿನ ವಿಶ್ಲೇಷಣೆ ಹಾಗೂ ಒಪ್ಪಂದ ರದ್ದತಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಸಮಿತಿಗೆ ನೀಡಿರಲಿಲ್ಲ. ಈ ಅಂಶಗಳನ್ನು ಸಂಸ್ಥೆಯ ವರದಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ರೈತರ ಜಮೀನಿಗೆ ಪ್ರತಿ ಎಕರೆ ಜಮೀನಿಗೆ ₹ 8 ಲಕ್ಷ ಪರಿಹಾರ ನೀಡಲಾಗಿದೆ. ಅದೇ ಜಮೀನನ್ನು ಚದರ ಅಡಿ ಲೆಕ್ಕದಲ್ಲಿ ಪ್ರತಿ ಚದರಡಿಗೆ ₹ 5 ಸಾವಿರ ದರದಲ್ಲಿ ನೈಸ್‌ ಮಾರಾಟ ಮಾಡಿದೆ. ಇದರಿಂದಾಗಿ ಎಕರೆ ಭೂಮಿಗೆ ₹ 21 ಕೋಟಿ ಲಾಭ ಮಾಡಿದಂತಾಗಿದೆ. ಪೆರಿಫೆರಲ್‌ ರಸ್ತೆ, ಲಿಂಕ್‌ ರಸ್ತೆ ಹಾಗೂ ಇಂಟರ್‌ಚೇಂಜ್‌ ರಸ್ತೆಗೆ ಬೇಕಾದ ಜಮೀನು 1,479 ಎಕರೆ. ಆದರೆ, ವಶಪಡಿಸಿಕೊಂಡಿದ್ದು 2,471 ಎಕರೆ ಎಂದು ವರದಿ ಸ್ಪಷ್ಟಪಡಿಸಿದೆ.

ಅತಿಯಾದ ಲಾಭದಿಂದಾಗಿ ಕಂಪನಿ ಈಗಾಗಲೇ ಯೋಜನೆಗೆ ಹೂಡಿರುವ ಬಂಡವಾಳವನ್ನು ವಾಪಸ್‌ ಸಂಪಾದಿಸಿದೆ. ಮುಂದಿನ 24 ವರ್ಷದಲ್ಲಿ ಅದು ಭಾರಿ ಲಾಭ ಗಳಿಸಲಿದೆ ಎಂದೂ ವರದಿ ಉಲ್ಲೇಖಿಸಿದೆ.

ಷರತ್ತು ನಿಗದಿಪಡಿಸಿಲ್ಲ: ‘ರಾಜ್ಯ ಸರ್ಕಾರದ ಜೊತೆ ತಾನು ಸಹಿ ಮಾಡಿರುವ ಯೋಜನೆಯ ಮೂಲ ಒಪ್ಪಂದದಲ್ಲಿ ಲಾಭ ಗಳಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರಮಾಣವನ್ನು ನಿಗದಿಪಡಿಸಿಲ್ಲ ಅಥವಾ ಯಾವುದೇ ಷರತ್ತನ್ನು ನಿಗದಿಪಡಿಸಿಲ್ಲ’ ಎಂದು ನೈಸ್‌ ಸಂಸ್ಥೆಯಪ್ರತಿನಿಧಿ ಪ್ರತಿಕ್ರಿಯೆ ನೀಡಿದ್ದಾರೆ.

‘1998ರಲ್ಲಿ ಸೋಮಶೇಖರ ರೆಡ್ಡಿ ಹಾಗೂ ಮಾಧುಸ್ವಾಮಿ 2005ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಇದೇ ಪ್ರಶ್ನೆಗಳನ್ನು ಎತ್ತಿದ್ದರು. ಕೋರ್ಟ್‌ ಈ ಅರ್ಜಿಗಳನ್ನು ತಿರಸ್ಕರಿಸಿತ್ತು. ಅಲ್ಲದೆ, ಅರ್ಜಿದಾರರಿಗೆ ದಂಡವನ್ನೂ ಹಾಕಿತ್ತು’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT