ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್‌ ಆಸ್ತಿ ₹75 ಕೋಟಿ, ಪ್ರಮೋದ್‌ ₹ 87.32 ಕೋಟಿ ಆಸ್ತಿಯ ಒಡೆಯ

ಒಂದು ವರ್ಷದಲ್ಲಿ ₹ 8.84 ಕೋಟಿ ಆಸ್ತಿ ಹೆಚ್ಚಳ
Last Updated 25 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ಮಂಡ್ಯ: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಸೋಮವಾರ ನಾಮಪತ್ರ ಸಲ್ಲಿಸುವಸಂದರ್ಭದಲ್ಲಿ ₹75 ಕೋಟಿ ಆಸ್ತಿ ಘೋಷಿಸಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.‌

ನಿಖಿಲ್‌ ಹೆಸರಿನಲ್ಲಿ ₹ 17.55 ಕೋಟಿ ಚರಾಸ್ತಿ, ₹ 22.55 ಕೋಟಿ ಸ್ಥಿರಾಸ್ತಿ ಇದೆ. ಎರಡು ನಿವೇಶನಗಳಲ್ಲಿ ₹ 22 ಕೋಟಿ ಹೂಡಿಕೆ ಮಾಡಿದ್ದಾರೆ. ₹ 3 ಕೋಟಿ ಮೌಲ್ಯದ ಎರಡು ಕಾರ್‌ಗಳಿವೆ. ₹ 2.40 ಕೋಟಿ ಸಾಲ ಇದೆ. ₹ 71 ಲಕ್ಷ ವಾರ್ಷಿಕ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ.

ತಾಯಿ ಅನಿತಾ ಕುಮಾರಸ್ವಾಮಿ ಅವರಿಗೆ ₹ 12 ಕೋಟಿ, ತಂದೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ₹ 9 ಲಕ್ಷ ಸಾಲ ನೀಡಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 2 ಕೋಟಿ ಹಣವಿದೆ.

ಕೈಯಲ್ಲಿ ₹ 12 ಸಾವಿರ ನಗದು ಇದೆ. ಅವರು ಬಿಬಿಎ ವಿದ್ಯಾಭ್ಯಾಸ ಮಾಡಿದ್ದಾರೆ.

ಪ್ರಮೋದ್ ₹ 87.32 ಕೋಟಿ ಆಸ್ತಿಯ ಒಡೆಯ

ಉಡುಪಿ: ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಪ್ರಮೋದ್ ಮಧ್ವರಾಜ್ ₹87,31,05,859 ಆಸ್ತಿ ಹೊಂದಿದ್ದಾರೆ.

ಚುನಾವಣಾ ಆಯೋಗಕ್ಕೆ ಮಧ್ವರಾಜ್ ಅವರು ಆಸ್ತಿ ವಿವರ ಸಲ್ಲಿಸಿದ್ದು₹83,71,38,439 ಚರಾಸ್ತಿ ಹಾಗೂ ₹3,59,67,420 ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ, ಸರ್ಕಾರಕ್ಕೆ ತೆರಿಗೆ ಬಾಕಿ ₹1,50,45,489 ಹಾಗೂ ₹83,81,272 (ಲಯಬಿಲಿಟಿಸ್‌ ಅಂಡರ್ ಡಿಸ್‌ಪ್ಯುಟ್‌) ಬಾಕಿ ಕಟ್ಟಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಪ್ರಮೋದ್ ಮಧ್ವರಾಜ್ ಅವರು ₹78,46,94,096 ಆಸ್ತಿ ಘೋಷಿಸಿಕೊಂಡಿದ್ದರು. ಒಂದೇ ವರ್ಷದಲ್ಲಿ ಅವರ ಆಸ್ತಿ ಮೌಲ್ಯ ₹8,84,11,763 ಹೆಚ್ಚಾಗಿದೆ. 2018ರಲ್ಲಿ ಸಾಲವೂ ಇರಲಿಲ್ಲ.

ಪ್ರಮೋದ್ ಮಧ್ವರಾಜ್ ಅವರ ಪತ್ನಿ ಸುಪ್ರಿಯಾ ಪ್ರಮೋದ್‌ ಮಧ್ವರಾಜ್ ಹಾಗೂ ಪುತ್ರಿ ಪ್ರತ್ಯಕ್ಷ ಪ್ರಮೋದ್‌ ಮಧ್ವರಾಜ್‌ ಇಬ್ಬರೂ ಕೋಟ್ಯಧೀಶ್ವರರು. ಪತ್ನಿ ₹5,70,06,557 ಆಸ್ತಿಯ ಒಡತಿಯಾಗಿದ್ದರೆ, ಮಗಳ ಹೆಸರಿನಲ್ಲಿ 3,19,72,362 ಮೌಲ್ಯದ ಆಸ್ತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT