ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಹರಿಸುವ ಜವಾಬ್ದಾರಿ ಸಂಸದೆ ಸುಮಲತಾ ನೋಡಿಕೊಳ್ತಾರೆ ಬಿಡಿ: ನಿಖಿಲ್‌

Last Updated 24 ಜೂನ್ 2019, 20:09 IST
ಅಕ್ಷರ ಗಾತ್ರ

ಮಂಡ್ಯ:ಬೆಳೆಗಳಿಗೆ ಕಾವೇರಿ ನೀರು ಹರಿಸುವ ಜವಾಬ್ದಾರಿಯನ್ನು ಲೋಕಸಭಾ ಚುನಾವಣೆ ಪರಾಜಿತ ಅಭ್ಯರ್ಥಿ ಕೆ.ನಿಖಿಲ್‌ ಅವರು ಸಂಸದೆ ಸುಮಲತಾ ಮೇಲೆ ಹೊರಿಸಿದ್ದಾರೆ.

ಮಳವಳ್ಳಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್‌, ‘ಕಾವೇರಿ ನೀರಿನ ವಿಚಾರದಲ್ಲಿ ಎಲ್ಲರಲ್ಲೂ ಚಿಂತೆ ಮೂಡಿದೆ. ಆರಿಸಿ ಕಳುಹಿಸಿದ್ದಾರಲ್ಲಾ ಸಂಸದರು, ಅವರೇ ನೋಡಿಕೊಳ್ತಾರೆ ಬಿಡಿ. ಅವರು ಬಿಜೆಪಿ ಬೆಂಬಲಿತ ಸದಸ್ಯರು. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ಉತ್ತಮ ಸಂಪರ್ಕ ಇದೆ. ಜನರ ನಿರೀಕ್ಷೆಯನ್ನು ಅವರು ಕಾಪಾಡಲಿ. ನಾವೆಲ್ಲ ಯಾರು ಸ್ವಾಮಿ, ನಾವೆಲ್ಲ ಸಣ್ಣವರು’ ಎಂದು ವ್ಯಂಗ್ಯವಾಡಿದರು.

‘ಕಾವೇರಿ ವಿಚಾರವಾಗಿ ಎಚ್‌.ಡಿ.ದೇವೇಗೌಡರು 20 ವರ್ಷಗಳಿಂದ ಹೋರಾಟ ಮಾಡಿ ಕೊಂಡು ಬಂದಿದ್ದಾರೆ. ನಾವು ಅವರ ಹಾದಿಯಲ್ಲೇ ನಡೆಯುತ್ತೇವೆ. ಆದರೆ ಈ ವಿಚಾರದಲ್ಲಿ ಸಂಸದರ ಜವಾಬ್ದಾರಿ ದೊಡ್ಡದು’ ಎಂದರು.

ನಾನು ಕುಡಿಯುವುದಿಲ್ಲ: ‘ಚುನಾವಣೆ ಸೋಲಿನ ನಂತರ ನಾನು ಕುಡಿದು ದೇವೇಗೌಡರ ಜೊತೆ ಗಲಾಟೆ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಕಾಲೇಜು ದಿನಗಳಲ್ಲಿ ನಾನು ಕುಡಿಯುತ್ತಿದ್ದೆ. ಆದರೆ, ಎಂಟು ವರ್ಷಗಳ ಹಿಂದೆಯೇ ಕುಡಿಯುವು ದನ್ನು ಬಿಟ್ಟಿದ್ದೇನೆ. ಸಾರ್ವಜನಿಕ ಜೀವನ ದಲ್ಲಿ ಇರುವ ಕಾರಣ ಕುಡಿಯುವುದನ್ನು ನಿಲ್ಲಿಸಿದ್ದೇನೆ. ದೇವೇಗೌಡರ ಮುಂದೆ ನಿಂತು ಮಾತನಾಡುವ ಧೈರ್ಯವೇ ನನಗೆ ಇಲ್ಲ. ಹೀಗಿರುವಾಗ ಕುಡಿದು ಅವರ ಮುಂದೆ ಜಗಳ ಮಾಡುವುದು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಜೆಡಿಎಸ್‌ ರಾಜ್ಯ ಘಟಕ, ಯುವ ಘಟಕದ ಅಧ್ಯಕ್ಷ ಸ್ಥಾನ ಪಡೆಯಲು ನನಗೆ ಅನುಭವದ ಕೊರತೆ ಇದೆ. ಪಕ್ಷದಲ್ಲಿ ಮುಂದೆ
ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ’ ಎಂದರು.

ನಾನು ಕುಡಿಯುವುದಿಲ್ಲ: ‘ಚುನಾವಣೆ ಸೋಲಿನ ನಂತರ ನಾನು ಕುಡಿದು ದೇವೇಗೌಡರ ಜೊತೆ ಗಲಾಟೆ ಮಾಡಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಕಾಲೇಜು ದಿನಗಳಲ್ಲಿ ನಾನು ಕುಡಿಯುತ್ತಿದ್ದೆ, ಆದರೆ ಎಂಟು ವರ್ಷಗಳ ಹಿಂದೆಯೇ ಕುಡಿಯುವುದನ್ನು ಬಿಟ್ಟಿದ್ದೇನೆ. ನಾನು ಸಾರ್ವಜನಿಕ ಜೀವನದಲ್ಲಿ ಇರುವ ಕಾರಣ ಕುಡಿಯುವುದನ್ನು ನಿಲ್ಲಿಸಿದ್ದೇನೆ. ದೇವೇಗೌಡರ ಮುಂದು ನಿಂತು ಮಾತನಾಡುವ ಧೈರ್ಯವೇ ನನಗೆ ಇಲ್ಲ. ಹೀಗಿರುವಾಗ ಕುಡಿದು ಅವರ ಮುಂದೆ ಜಗಳ ಮಾಡುವುದು ಸಾಧ್ಯನಾ’ ಎಂದು ಪ್ರಶ್ನಿಸಿದರು.

‘ಜೆಡಿಎಸ್‌ ರಾಜ್ಯ ಘಟಕ, ಯುವ ಘಟಕದ ಅಧ್ಯಕ್ಷ ಸ್ಥಾನ ಪಡೆಯಲು ನನಗೆ ಇನ್ನೂ ಅನುಭವದ ಕೊರತೆ ಇದೆ. ಪಕ್ಷದಲ್ಲಿ ಮುಂದೆ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT