ಗುರುವಾರ , ಡಿಸೆಂಬರ್ 12, 2019
26 °C

ನಿರುಪಾಧೀಶ ಸ್ವಾಮಿಗೆ ಶಿವರಾತ್ರೀಶ್ವರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಅಡವಿ ಸಿದ್ಧೇಶ್ವರ ಮಠದ ನಿರುಪಾಧೀಶ ಸ್ವಾಮಿ ಅವರ ‘ಸಿದ್ಧರಾಮ ವಿಲಾಸ’ ಕೃತಿ 2017ನೇ ಸಾಲಿನ ‘ಶಿವರಾತ್ರೀಶ್ವರ ಪ‍್ರಶಸ್ತಿ’ಗೆ ಆಯ್ಕೆಯಾಗಿದೆ.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ನೀಡುವ ಈ ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಮರೇಗುದ್ದಿ ಗ್ರಾಮದ ನಿರುಪಾಧೀಶ ಸ್ವಾಮಿ ಅತ್ಯುತ್ತಮ ವಾಗ್ಮಿ ಹಾಗೂ ಪ್ರವಚನಕಾರರು.

ಕಾವ್ಯ, ಗದ್ಯ, ಚೌಪದಿ, ವಚನ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಅವರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಪ್ರತಿಕ್ರಿಯಿಸಿ (+)