ಬುಧವಾರ, ಸೆಪ್ಟೆಂಬರ್ 23, 2020
20 °C

ಕಾರ್‌ ಖರೀದಿ ಉತ್ತೇಜಿಸಲು ನಿಸಾನ್‌ ಇಂಡಿಯಾದಿಂದ ‘ರೆಡ್‌ ವೀಕೆಂಡ್ಸ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್‌ ಖರೀದಿಸುವುದನ್ನು ಉತ್ತೇಜಿಸಲು ನಿಸಾನ್ ಇಂಡಿಯಾ, ಈ ತಿಂಗಳು ‘ರೆಡ್ ವೀಕೆಂಡ್ಸ್’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಡಿ, ನಿಸಾನ್ ಮತ್ತು ದಟ್ಸನ್ ಮಾದರಿಯ ವಾಹನಗಳಿಗೆ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ. ಕಾರ್‌ ಖರೀದಿ ವೇಳೆ ₹ 1.15 ಲಕ್ಷದವರೆಗೆ ಪ್ರಯೋಜನ ಪಡೆಯಬಹುದು. ₹ 40 ಸಾವಿರವರೆಗಿನ ನಗದು ರಿಯಾಯ್ತಿ, ₹ 40 ಸಾವಿರದ
ವರೆಗೆ ವಿನಿಮಯ ಬೋನಸ್ ಮತ್ತು ₹ 10 ಸಾವಿರ ರೂಪಾಯಿವರೆಗೆ ಕಾರ್ಪೊರೇಟ್ ಡಿಸ್ಕೌಂಟ್ ಪಡೆಯಬಹುದು. ಗ್ರಾಹಕರು ₹ 1 ಕೋಟಿವರೆಗಿನ ಬಹು ಮಾನ ಗೆಲ್ಲುವ ಅವಕಾಶವೂ ಇದೆ.

ಗ್ರಾಹಕರು ಹೊಸ ದಟ್ಸನ್ ರೆಡಿ-ಗೋ ಕಾರ್‌ ಖರೀದಿಯಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ಆಕರ್ಷಕ ಬೆಲೆಯಲ್ಲಿ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಈ ಕೊಡುಗೆ ದಟ್ಸನ್ ಗೋ ಮತ್ತು ‘ದಟ್ಸನ್ ಗೋ+’ ಕ್ಕೆಅನ್ವಯವಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು