ಭಾನುವಾರ, ಸೆಪ್ಟೆಂಬರ್ 26, 2021
21 °C

ಹನಿಮೂನ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಹಾಕ್ತೀವಿ: ನಿವೇದಿತಾ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಬಿಗ್‌ಬಾಸ್‌ನಲ್ಲೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡೆವು. ಅಂದುಕೊಂಡಂತೆ ಮದುವೆ ನಡೆದಿದೆ. ಚಂದನ್ ನನ್ನ ಕನಸು ಈಡೇರಿಸುತ್ತಾರೆ. ಹನಿಮೂನ್‌ನ ಫೋಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತೇವೆ. ನೋಡಿರಿ’ ಎಂದು ನಿವೇದಿತಾ ಕುತೂಹಲ ಕೆರಳಿಸಿದರು.

ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಸ್ನೇಹಿತರಾದ ರ‍್ಯಾಪರ್‌ ಚಂದನ್‌ಶೆಟ್ಟಿ ಮತ್ತು ನಿವೇದಿತಾ ಗೌಡ ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಮೈಸೂರಿನ ಹೊರ ವಲಯದಲ್ಲಿನ ಹಿನಕಲ್‌ನ ಸ್ಪೆಕ್ಟ್ರಾ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 8.15ರಿಂದ 9ಗಂಟೆ ನಡುವಿನ ಮೀನ ಲಗ್ನದಲ್ಲಿ ಚಂದನ್‌ಶೆಟ್ಟಿ, ನಿವೇದಿತಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು.

ಹನಿಮೂನ್‌ಗಾಗಿ ಪ್ಯಾರಿಸ್‌ಗೆ: ‘ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾದ ಖುಷಿ. ನಿವೇದಿತಾ ಕನಸಿನಂತೆ ಮದುವೆ ನಡೆದಿದೆ. ಆಕೆಯೇ ನನ್ನ ಬಾಳಿನ ದಾರಿದೀಪ. ಮೈಸೂರಿನ ಅಳಿಯ ಎಂಬ ಹೆಮ್ಮೆ ನನ್ನದು. ರಾಜಕುಮಾರಿಯನ್ನು ಮದುವೆಯಾದ ಫೀಲ್ ನನ್ನದಾಗಿದೆ. ಒಳ್ಳೆಯ ಕಂಪನಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ ನಿವೇದಿತಾ. ಅವರು ಸ್ವತಂತ್ರರು. ಹನಿಮೂನ್‌ಗಾಗಿ ಪ್ಯಾರಿಸ್‌ಗೆ ಹೋಗ್ತೀವಿ’ ಎಂದು ಚಂದನ್‌ಶೆಟ್ಟಿ ಮಾಂಗಲ್ಯ ಧಾರಣೆ ಬಳಿಕ ಪ್ರತಿಕ್ರಿಯಿಸಿದರು.

ಗೌಡ ಹಾಗೂ ಶೆಟ್ಟಿ ಸಂಪ್ರದಾಯಕ್ಕನುಗುಣವಾಗಿ ಮದುವೆ ಶಾಸ್ತ್ರಗಳು ನಡೆದವು. ನಿವೇದಿತಾ ಪೋಷಕರಾದ ಹೇಮಾ–ರಮೇಶ್‌, ಚಂದನ್‌ಶೆಟ್ಟಿ ಪೋಷಕರಾದ ಪ್ರೇಮಲತಾ–ಪರಮೇಶ್‌ ಮದುವೆ ಶಾಸ್ತ್ರಗಳನ್ನು ಪುರೋಹಿತರ ಆಣತಿಯಂತೆ ನೆರವೇರಿಸಿದರು.

2019ರ ಯುವ ದಸರಾದ ವೇದಿಕೆಯಲ್ಲೇ ಚಂದನ್‌ ಶೆಟ್ಟಿ, ನಿವೇದಿತಾ ಗೌಡ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ಇದನ್ನು ನಿವೇದಿತಾ ಒಪ್ಪಿಕೊಂಡಿದ್ದರು. ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿನ ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಇದರ ಬಳಿಕ ಮೈಸೂರಿನಲ್ಲೇ ಇವರಿಬ್ಬರ ಅದ್ಧೂರಿ ನಿಶ್ಚಿತಾರ್ಥ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು