ಮಂಗಳವಾರ, ನವೆಂಬರ್ 19, 2019
22 °C

ನ.3ರಂದು ಎನ್‌ಎಂಎಂಎಸ್‌ ಪರೀಕ್ಷೆ

Published:
Updated:

ಬೆಂಗಳೂರು: ಆರ್ಥಿಕ ದುರ್ಬಲ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ಬೆಂಬಲ ನೀಡುವ ಕೇಂದ್ರ ಸರ್ಕಾರ ಪ್ರಾಯೋಜಿತ ನ್ಯಾಷನಲ್‌ ಮೀನ್‌ ಕಮ್‌ ಮೆರಿಟ್‌ ಸ್ಕಾಲರ್‌ಶಿಪ್‌ (ಎನ್‌ಎಂಎಂಎಸ್‌) ಪರೀಕ್ಷೆ ನವೆಂಬರ್‌ 3ರಂದು ನಡೆಯಲಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿಗಳ ಅರ್ಜಿಯನ್ನು ಆನ್‌ಲೈನ್‌ ಮೂಲಕ ಇದೇ 25ರೊಳಗೆ ಸಲ್ಲಿಸಬೇಕು. ಮಾಹಿತಿಗೆ http://kseeb.kar.nic.in ವೆಬ್‌ಸೈಟ್‌ ನೋಡಬಹುದು ಎಂದು ಕರ್ನಾಟಕ ಶಾಲಾ ಮೌಲ್ಯಾಂಕನ ಗುಣಮಟ್ಟ ಮತ್ತು ಅಂಗೀಕರಣ ಪರಿಷತ್‌ನ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)