ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

642 ಪ್ರೌಢಶಾಲೆಗಳಲ್ಲಿ ಗಣಿತ ಶಿಕ್ಷಕರಿಲ್ಲ!

Last Updated 13 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಸಮಿತಿ(ಆರ್‌ಎಂಎಸ್‌ಎ) ಕಾರ್ಯ ನಿರ್ವಹಣೆ, ಲಭ್ಯ ಇರುವ ಹಣದ ಬಳಕೆಯಲ್ಲಿ ತೀವ್ರ ವೈಫಲ್ಯ ಕಂಡಿರುವುದನ್ನು ಭಾರತೀಯ ಮಹಾಲೇಖಪಾಲರ ವರದಿ (ಸಿಎಜಿ) ಕಂಡುಕೊಂಡಿದ್ದು, 642 ಪ್ರೌಢಶಾಲೆಗಳಲ್ಲಿ ಗಣಿತ ಶಿಕ್ಷಕರೇ ಇಲ್ಲದಿರುವುದನ್ನು ಗುರುತಿಸಿದೆ.

2018ರ ಮಾರ್ಚ್‌ಗೆ ಅಂತ್ಯಗೊಂಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವರದಿಯಲ್ಲಿ ಇದನ್ನು ತಿಳಿಸಲಾಗಿದೆ. ಲಭ್ಯ ಇದ್ದ ಹಣದ ಬಳಕೆ ಶೇ 30ರಿಂದ 55ರಷ್ಟು ಆಗಿದೆ, ಹೀಗಾಗಿ ಕಂಪ್ಯೂಟರ್‌ ಶಿಕ್ಷಣ, ಪ್ರಯೋಗಶಾಲಾ ವಸ್ತುಗಳ ಮತ್ತು ಪೀಠೋಪಕರಣಗಳ ಖರೀದಿಯಲ್ಲಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ತಿಳಿಸಲಾಗಿದೆ.

516 ಶಾಲೆಗಳಲ್ಲಿ ಬಾಲಕಿಯರು ಮತ್ತು ಬಾಲಕರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ತರಗತಿಗಳಲ್ಲಿ 40 ವಿದ್ಯಾರ್ಥಿ
ಗಳು ಮಾತ್ರ ಇರಬೇಕೆಂಬ ನಿಯಮವಿದೆ. 2,721 ಶಾಲೆಗಳಲ್ಲಿ ಅನುಪಾತ 1:41ರಿಂದ 1;69ರವರೆಗೂ ಇದೆ. 30 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು (ಪಿಟಿಆರ್‌) ಇರಬೇಕೆಂಬ ನಿಯಮದ ಬದಲಿಗೆ 874 ಶಾಲೆಗಳಲ್ಲಿ ಪಿಟಿಆರ್‌ 1:30ಕ್ಕಿಂತ ಹೆಚ್ಚಿದೆ ಎಂದು ತಿಳಿಸಿದೆ.

ಕಲಿಕೆಯನ್ನು ಅರ್ಥಪೂರ್ಣವಾಗಿಸಲು, ಮಕ್ಕಳಲ್ಲಿ ವಿಜ್ಞಾನ, ಗಣಿತದಲ್ಲಿ ಆಸಕ್ತಿ ಮೂಡಿಸಲು ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿ 2016–18ರ ನಡುವೆ ₹ 2.39 ಕೋಟಿ ಮೌಲ್ಯದ ವಿಜ್ಞಾನ, ಗಣಿತ ಕಿಟ್‌ಗಳನ್ನು ಖರೀದಿಸಬೇಕಿತ್ತು. ಆದರೆ ಖರೀದಿ ಆಗಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT